Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಅಬ್ಬಬ್ಬಾ… ಅಗತ್ಯ ವಸ್ತುಗಳು, ತರಕಾರಿ, ಹಣ್ಣು-ಹಂಪಲುಗಳ ಬೆಲೆ ಗಗನಕ್ಕೆ: ಸಾಮಾನ್ಯ ಜನರ ಬದುಕು ತತ್ತರ

ಗೃಹಿಣಿಯರು ಅಡುಗೆ ಮನೆಯಲ್ಲಿ ಅಡುಗೆಗೆ ಬಳಸುವ ಪದಾರ್ಥಗಳ ಬೆಲೆ ಇತ್ತೀಚಿನ ತಿಂಗಳಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಕೊರೋನಾ ಮೊದಲ ಮತ್ತು ಎರಡನೇ ಅಲೆಯ ನಂತರ ನಗರ, ಪಟ್ಟಣ ಪ್ರದೇಶಗಳಲ್ಲಿ ಹಲವು ಖಾಸಗಿ ಕಂಪೆನಿಗಳ ಉದ್ಯೋಗಿಗಳು ಕೆಲಸ ಕಳೆದುಕೊಂಡರೆ ಹಲವರ ಆದಾಯಕ್ಕೆ ಪೆಟ್ಟು ಬಿದ್ದಿದೆ.

ಬಡ, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗಗಳ ಜನರು ಕಳೆದ 20 ತಿಂಗಳಿನಿಂದ ಆದಾಯ ಕುಗ್ಗಿ ಹೋಗಿ ಒಂದೆಡೆ ನರಳುತ್ತಿದ್ದರೆ ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುವುದು ಮತ್ತಷ್ಟು ಕಂಗೆಡಿಸಿದೆ. ಈ ಪರಿಸ್ಥಿತಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಇದೆ.

ಕರ್ನಾಟಕದಲ್ಲಿ, ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ, ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಹಣ್ಣು-ತರಕಾರಿಗಳ ಬೆಲೆ ಶೇಕಡಾ 5ರಿಂದ 10ರಷ್ಟು ಹೆಚ್ಚಾಗಿದ್ದು, ಡೀಸೆಲ್ ಬೆಲೆ ರಾಜ್ಯದಲ್ಲಿ ನೂರು ರೂಪಾಯಿ ಗಡಿ ದಾಟಿದೆ ಎನ್ನುತ್ತಾರೆ.

ವೈಜಾಗ್ ನಲ್ಲಿರುವ ಪೆಡ್ಡ ವಾಲ್ಟೇರ್ ರೈತು ಬಜಾರ್ ಇಂದಿನ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿದೆ. ಉದಾಹರಣೆಗೆ, ಕಳೆದ ಶನಿವಾರ, ಒಂದು ಕಿಲೋ ಟೊಮ್ಯಾಟೊವನ್ನು ಇಲ್ಲಿ 52 ರೂಪಾಯಿಗೆ ಮಾರಾಟ ಮಾಡಲಾಗಿದ್ದು, ನಿನ್ನೆ ಮಂಗಳವಾರ ಅದು 44 ರೂ.ಗೆ ಇಳಿದಿದೆ. ಆದರೆ ಟೊಮ್ಯಾಟೊಗಳು ಕಡಿಮೆಯಾಗುತ್ತಿರುವುದರಿಂದ ಬೆಲೆ ಶೀಘ್ರದಲ್ಲೇ ಮತ್ತೆ 50 ರೂಗಳನ್ನು ದಾಟಬಹುದು.

ಅಧಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಟೊಮ್ಯಾಟೊ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿ ಜಗದೀಶ್ ಹೇಳುತ್ತಾರೆ.

ವಿಜಯವಾಡದಲ್ಲಿ ನಿನ್ನೆ ಟೊಮ್ಯಾಟೊ ಕೆಜಿಗೆ 40 ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಹದಿನೈದು ದಿನಗಳ ಹಿಂದೆ ಟೊಮ್ಯಾಟೊ ಬೆಲೆ ಕೆಜಿಗೆ 24 ರೂ ಇದ್ದಿತು. ಈರುಳ್ಳಿ 15 ದಿನಗಳ ಹಿಂದೆ 29 ರೂಪಾಯಿ ಇದ್ದರೆ,  ಇಂದು 40 ರೂಪಾಯಿಗೆ ಏರಿಕೆಯಾಗಿದೆ. ಹಸಿರು ಮೆಣಸಿನಕಾಯಿ 34 ರೂಪಾಯಿಗೆ ಏರಿಕೆಯಾಗಿದ್ದು, ಹದಿನೈದು ದಿನಗಳ ಹಿಂದೆ 16 ರೂಪಾಯಿ ಇದ್ದಿತು. ತರಕಾರಿ ಬೆಲೆ ನೋಡಿ ಆಘಾತವಾಯಿತು ಎಂದು ಇಲ್ಲಿನ ಗೃಹಿಣಿ ಧನಲಕ್ಷ್ಮಿ ಹೇಳುತ್ತಾರೆ.

ಹೈದರಾಬಾದ್ ಮಾರುಕಟ್ಟೆಯಲ್ಲಿ, ಟೊಮ್ಯಾಟೊ ಮತ್ತು ಹಸಿರು ಮೆಣಸಿನಕಾಯಿಗಳಂತಹ ತರಕಾರಿಗಳು ಈ ವರ್ಷದಲ್ಲಿ ಕ್ರಮವಾಗಿ ಒಂದು ತಿಂಗಳ ಹಿಂದೆ 10ರಿಂದ 15 ರೂಪಾಯಿ ಸಿಗುತ್ತಿದ್ದರೆ ಇಂದು 30ರೂಪಾಯಿಗೆ ಏರಿಕೆಯಾಗಿದೆ.  ಹೈದರಾಬಾದ್‌ನ ದೊಡ್ಡ ಬೋವೆನ್‌ಪಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಮೊನ್ನೆ ಸೋಮವಾರದವರೆಗೆ ಕೆಜಿಗೆ 20 ರೂಪಾಯಿ ಇದ್ದರೆ ಇಂದು 30ರೂಪಾಯಿಗೆ ಏರಿಕೆಯಾಗಿದೆ.

ಪ್ರವಾಹ ಪೀಡಿತ ಕೇರಳಕ್ಕೆ ಬೆಲೆ ಏರಿಕೆ ಹೊಡೆತ: ಅದೇ ರೀತಿ ಕೊತ್ತಂಬರಿ ಸೊಪ್ಪು 10 ರಿಂದ 50 ರೂ.ಗೆ ಏರಿದೆ. ಮತ್ತು ಹುರುಳಿ ಮತ್ತು ಕ್ಯಾಪ್ಸಿಕಂ ಬೆಲೆಗಳು ಹದಿನೈದು ದಿನಗಳಲ್ಲಿ ದ್ವಿಗುಣಗೊಂಡಿದೆ. ಕೊಳೆ ರೋಗದಿಂದಾಗಿ ತರಕಾರಿಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ – ಬೆಳೆಗಳ ಕಾಂಡ ಮತ್ತು ಹಣ್ಣಿನ ಮೇಲೆ ದಾಳಿ ಶಿಲೀಂಧ್ರ ರೋಗ ದಾಳಿ ಮಾಡುತ್ತಿದೆ.

ಸೆಪ್ಟೆಂಬರ್ ಮಧ್ಯದ ದರಗಳಿಗೆ ಹೋಲಿಸಿದರೆ ಪ್ರವಾಹ ಪೀಡಿತ ಕೇರಳವು 100-300 ಪ್ರತಿಶತದಷ್ಟು ಬೆಲೆ ಏರಿಕೆಯನ್ನು ಅನುಭವಿಸುತ್ತಿದೆ. ಕೇರಳವು ಹೆಚ್ಚಿನ ತರಕಾರಿಗಳಿಗೆ ತಮಿಳುನಾಡು ಮತ್ತು ಕರ್ನಾಟಕವನ್ನು ಅವಲಂಬಿಸಿದೆ, ಇವೆರಡೂ ಮಾನ್ಸೂನ್ ನಿಂದ ಜರ್ಝರಿತವಾಗಿದೆ. ಸಾರಿಗೆ ವೆಚ್ಚ ಹೆಚ್ಚಳ ಮತ್ತಷ್ಟು ದುಬಾರಿ ಮಾಡಿದೆ.

ಒಂದು ತಿಂಗಳ ಹಿಂದೆ ಪ್ರತಿ ಕೆಜಿಗೆ 20-25 ರೂಪಾಯಿಗಳಷ್ಟಿದ್ದ ಟೊಮ್ಯಾಟೊ ಈಗ 65-70 ರೂಪಾಯಿಯಾಗಿದೆ. ಈರುಳ್ಳಿ ಕೆಜಿಗೆ 20-22 ರೂಪಾಯಿಗಳಿಂದ 50-55 ರೂಪಾಯಿಗಳಿಗೆ ಏರಿಕೆಯಾಗಿದೆ. ನುಗ್ಗೆಕಾಯಿ 25 ರೂಪಾಯಿಗಳಿಂದ 80 ರೂಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ವಾರದಿಂದ ಪ್ರತಿ ಕೆಜಿಗೆ 50 ರೂಪಾಯಿಯಿಂದ ಟೊಮ್ಯಾಟೊ 80 ರೂಪಾಯಿಗೆ ಏರಿಕೆಯಾಗಿದೆ.

ಒಂದು ವಾರದಲ್ಲಿ ಈರುಳ್ಳಿ ಬೆಲೆ ಕೆಜಿಗೆ 30 ರಿಂದ 45ರೂಪಾಯಿಗೆ ಜಿಗಿದಿದೆ. ಹೆಚ್ಚಿನ ತರಕಾರಿಗಳ ಬೆಲೆಯಲ್ಲಿ ಶೇ 10-15ರಷ್ಟು ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಆಶಾವಾದ ಹೊಂದಿದ್ದಾರೆ.

No Comments

Leave A Comment