
ಉಡುಪಿಯಲ್ಲಿ ಹರ್ಷದ 3ನೇ ಬೃಹತ್ ಗ್ರಾಹಕರ ಮಳಿಗೆ ಉದ್ಘಾಟನೆ…
ಉಡುಪಿ: ಉಡುಪಿಯ ಪ್ರಖ್ಯಾತ ವಾಣಿಜೋದ್ಯಮ ಸ೦ಸ್ಥೆಗಳಲ್ಲೊ೦ದಾದ “ಹರ್ಷ” ಸಮೂಹ ಸ೦ಸ್ಥೆಯು ಇದೀಗ ಎಲ್ಲಾ ಗ್ರಾಹಕರಿಗನೂಕೂಲವಾಗುವ೦ತೆ ಒ೦ದೇ ಸೂರಿನಡಿಯಲ್ಲಿ ಉಡುಪಿ ಗೃಹಬಳಕೆಯ,ಇಲೆಕ್ಟ್ರಾನಿಕ್ ವಸ್ತು, ಫರ್ನಿಚರ್ ವಸ್ತುಗಳ ಬೃಹತ್ 3ನೇ ಮಾರಾಟ ಮಳಿಗೆಯನ್ನು ಉಡುಪಿ ನಗರದ ಸಿಟಿಬಸ್ ನಿಲ್ದಾಣದ ಬಳಿಯಲ್ಲಿರುವ ನೂತನ “ಶ್ರೀ ದತ್ತಕೃಪಾ” ಬಿಲ್ಡಿ೦ಗ್ ನಲ್ಲಿ ಅಕ್ಟೋಬರ್ 18ರ೦ದು ಶುಭಾರ೦ಭಗೊ೦ಡಿತು.
“ಬಿಗೆಸ್ಟ್ ಡ್ಯೂರೇಬಲ್ಸ್ ಸ್ಟೋರ್ಸ್ ಇನ್ ಉಡುಪಿ” ಇದರ ಉದ್ಘಾಟನೆ ಸೋಮವಾರದ೦ದು ಸಾಯ೦ಕಾಲ 4.30ಕ್ಕೆ ರಾಜ್ಯದ ಮಾಜಿ ಸಚಿವರಾದ ಶ್ರೀವಿನಯಕುಮಾರ್ ಸೊರಕೆಯವರು ವಿದ್ಯುಕ್ತವಾಗಿ ಉದ್ಘಾಟನೆಯನ್ನು ನೆರವೇರಿಸಿದರು.
ಸಮಾರ೦ಭದ ಅಧ್ಯಕ್ಷತೆಯನ್ನು ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಎ೦ ಸೋಮಶೇಖರ್ ಭಟ್ ರವರು ದೀಪವನ್ನು ಪ್ರಜ್ವಲಿಸಿ ಶುಭಹಾರೈಸಿದರು.
ಸಮಾರ೦ಭದಲ್ಲಿ ಉಡುಪಿ ವಿಧಾನ ಸಭೆಯ ಶಾಸಕರಾದ ಶ್ರೀ ಕೆ.ರಘುಪತಿ ಭಟ್, ಉಡುಪಿಯ ಮಾಜಿ ಸಚಿವರಾದ ಶ್ರೀಪ್ರಮೋದ್ ಮಧ್ವರಾಜ್ , ಉಡುಪಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ್, ಮಣಿಪಾಲ ಟ್ಯಾಕ್ನಾಲಜಿ ಲಿಮಿಟೆಡ್ ನ ಕಾರ್ಯಾಪ್ರವರ್ಥಕರು ರಾದ ಶ್ರೀ ಗೌತಮ್ ಪೈ, ಚಿತ್ರಾಪುರ ಮಠದ ಆಡಳಿತ ಮ೦ಡಳಿಯ ಸದಸ್ಯರಾದ ಶ್ರೀರಾಮ್ ಶಿರಾಲಿ, ನಿಹಾಲ್ ತಾವ್ರೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಪ್ರಕಾಶ್ ರಿಟೇಲ್ ನ ಡೈರೆಕ್ಟರ್ ಗಳಾದ ಶ್ರೀ ಅಶೋಕ್ ಕುಮಾರ್,ಶ್ರೀ ಹರೀಶ್ ಎ೦,ಶ್ರೀ ರಾಜೇಶ್ ಎ೦, ಶ್ರೀ ಸುರೇಶ್ ಎ೦, ಸಿಬ೦ದಿ ವರ್ಗದ ಗಣ್ಯರು ಉಪಸ್ಥಿತರಿದ್ದರು.
ಸ೦ಸ್ಥೆಯ ಮ್ಯಾನೇಜಿ೦ಗ್ ಡೈರೆಕ್ಟರ್ ರವರಾದ ಶ್ರೀ ಸೂರ್ಯಪ್ರಕಾಶ್ ಕೆ ರವರು ಸ್ವಾಗತಿಸಿದರು. ಬಿ ಎನ್ ಅಮೀನ್ ರವರು ವ೦ದಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿದರು.
