Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಪಿಪಿಸಿ: ವಿಜ್ಞಾನ ಸಮುಚ್ಚಯಕ್ಕೆ ಶಿಲಾನ್ಯಾಸ, ಗಣಕವಿಜ್ಞಾನ ಪ್ರಯೋಗಾಲಯ ಉದ್ಘಾಟನೆ: 21ನೇ ಶತಮಾನಕ್ಕೆ ತಯಾರಿ ಎನ್‌ಇಪಿ ಗುರಿ: ಸಿಎಂ

ಉಡುಪಿ:ನೂತನ `ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇ ಪಿ)ಯ ಗುರಿ 11ನೇ ಶತಮಾನಕ್ಕೆ ಯುವಕ-ಯುವತಿಯರನ್ನು ತಯಾರುಗೊಳಿಸುವುದಾಗಿದೆ. ಇದುವರೆಗೆ ಮೆಕಾಲೆ ಶಿಕ್ಷಣ ನೀತಿ ಇದ್ದರೆ ಇನ್ನು ಮುಂದೆ ಮಕ್ಕಳ ವಿಕಸನಕ್ಕೆ ಪೂರಕವಾಗುವ ಶಿಕ್ಷಣವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ 7.44 ಕೋ.ರೂ. ವೆಚ್ಚದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನೂತನ ವಿಜ್ಞಾನ ಸಮುಚ್ಚಯದ ಶಿಲಾನ್ಯಾಸ ಮತ್ತು 70 ಲ.ರೂ. ವೆಚ್ಚದಲ್ಲಿ ನಿರ್ಮಸಿದ ಪ.ಪೂ ಕಾಲೇಜಿನ “ಗಣಕವಿಜ್ಞಾನ ಪ್ರಯೋಗಾಲಯದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೆ ಕಲಾ, ವಿಜ್ಞಾನ, ವಾಣಿಜ್ಯ ಕೋರ್ಸ್‌ಗಳ ವಿದ್ಯಾರ್ಥಿಗಳು ಅದದೇ ವಿಷಯಗಳನ್ನು ಕಲಿಯಬೇಕಿದ್ದರೆ ಮುಂದೆ ಯಾವುದೇ ವಿಷಯದವರು ಇನ್ಯಾವುದೇ ವಿಷಯಗಳನ್ನು ಆಯ್ದು ಕೊಳ್ಳಬಹುದು. ಪದವಿಯ ಯಾವುದೇ ವರ್ಷದಲ್ಲಿ ಕಲಿಕೆ ನಿಲ್ಲಿಸಿದರೂ ಅಲ್ಲಿಯವರೆಗಿನ ಪ್ರಮಾಣಪತ್ರಗಳು ಸಿಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಯುವ ವೃ೦ದವನ್ನು ಸಿದ್ಧತೆ ಮಾಡಲು ಮೋದಿ ಎನ್ಇ ಪಿ ಜಾರಿಗೆ ತಂದಿದ್ದಾರೆ. ಸುಶಿಕ್ಷಿತ , ಸಮೃದ್ಧ ಭಾರತ ನೋವಿಯವರ ಕನಸು ಇದನ್ನು ಸಾಧ್ಯವಾಗಿಸಲು ನಾವೆಲ್ಲರೂ ಚಿಂತೆನೆ ಮಾಡಬೇಕು.

ಈಗ ಒಂದು ಕಾಲೇಜು ಇನ್ನೊಂದು. ಕಾಲೇಜಿನೊಂದಿಗೆ ಸ್ಪರ್ಧಿಸುವುದಲ್ಲ ತರಗತಿ ಕೋಣೆ ಮತ್ತು ವಿವಿಧ ಯಾಪ್ ಗಳ ಸ್ಪರ್ಧೆ ನಡೆಯುತ್ತಿದೆ. ತಂತ್ರಜ್ಞಾನ ಮನುಷ್ಯನನ್ನು ಓವರ್‌ಟೇಕ್ ಮಾಡುತ್ತಿದೆ. ಬದಲಾಗಲು ಸಿದ್ಧವಿಲ್ಲದ ಸಂಸ್ಥೆಗಳು ಮುಂಚೂಣಿಯಲ್ಲಿದ್ದಲು ಸಾಧ್ಯವಿಲ್ಲ ಹಣ ಮತ್ತು ಆಸ್ತಿಗಿ೦ತ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಬೊಮ್ಮಾಯಿ ಹೇಳಿದರು.

ಅಧ್ಯಕ್ಷ ವಹಿಸಿದ್ದ ಅದಮಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ನಮ್ಮ ಗುರುಗಳ ಗುರಿ ನಮ್ಮ ಯುವಕರು ನೋಬೆಲ್ ಪ್ರಶಸ್ತಿ ಪಡೆಯಬೇಕೆಂದಿರುವುದು. ನಮ್ಮ ಯುವಕರು ಓದಿ ವಿದೇಶಗಳಲ್ಲಿ ಸೇವೆ ಸಲ್ಲಿಸುವುದನ್ನು ಅವರು ಒತ್ತಿರಲಿಲ್ಲ. ಇದಕ್ಕಾಗಿಯೇ ಬೆಂಗಳೂರಿನಲ್ಲಿ ಯಾರ ಸಂಶೋಧನ ಕೇಂದ್ರವನ್ನು ತೆಗೆದರು ಎಂದರು.

ಸಚಿವರಾದ ಸುನಿಲ್ ಕುಮಾರ್ ಕೋಟಿ ಶ್ರೀನಿವಾಸ ಪೂಜಾರಿ,ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್ ನಗರಸಭಾಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್, ಪ.ಪೂ ಕಾಲೇಜುಗಳ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೋಶಾಧಿಕಾರಿ ಪ್ರವೀಣ್ ಕುಮಾರ್‌, ಪಿಪಿಸಿ ಕಾಲೇಜಿನ ಉಪಪ್ರಾ೦ಶುಪಾಲರಾದ ಡಾ.ಪ್ರಕಾಶ್ ರಾವ್, ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಮಾ ಬಾಳಿಗ, ಉಪಪ್ರಾ೦ಶುಪಾಲರಾದ ಗುರುರಾಜ ರವರು ಉಪಸ್ಥಿತರಿದ್ದರು.

ಪಿಪಿಸಿ ಕಾಲೇಜಿನ ಆಡಳಿತ ಮ೦ಡಳಿಯ ಗೌರವ ಕಾರ್ಯದರ್ಶಿ ಗಳಾದ ಡಾ.ಜಿ ಎಸ್ ಚಂದ್ರಶೇಖರ್ ರವರು ಸ್ವಾಗತಿಸಿದರು, ಪ್ರಾ೦ಶುಪಾಲರಾದ ಡಾ.ರಾಘವೇ೦ದ್ರ ಎ ವಂದಿಸಿದರು. ಉಪನ್ಯಾಸಕರಾದ ರಮಾನಂದ ಕಾರ್ಯಕ್ರಮವನ್ನು ನಿರ್ವಹಿಸಿದರು.

No Comments

Leave A Comment