Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಉಡುಪಿ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ

ಉಡುಪಿ : ಉಡುಪಿ ನಗರದ ಮಂಜುನಾಥ್ ಕಣ್ಣಿನ ಆಸ್ಪತ್ರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ ಅಂತರರಾಜ್ಯ ಕಳ್ಳನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಸೇರಿದಂತೆ ಕೆಲವು ಕಡೆಗಳಲ್ಲಿ ಆರೋಪಿಯು ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ.ಬಂಧಿತ ಆರೋಪಿಯು ಕಾರ್ಕಳದ ನಿವಾಸಿ‌ ಸುರೇಶ್ ಪೂಜಾರಿ ಎಂದು ತಿಳಿದು ಬಂದಿದೆ.

ಮಂಜುನಾಥ್ ಕಣ್ಣಿನ ಆಸ್ಪತ್ರೆಯ ಶೆಟರ್ ಒಡೆದು ಸುಮಾರು 4,79,500 ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದನು. ಆ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ 138 /2021, ಕಲಂ 457,380 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.

ಚಹರೆ ಗುರುತಿಸಿ 11/10/2021ರಂದು ಮುಂಜಾನೆ 5:30 ಗಂಟೆಯ ಸುಮಾರಿಗೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಿರ್ವ, ಹಿರಿಯಡ್ಕ, ಕಾರ್ಕಳ ನಗರ ಠಾಣೆ, ಪಡುಬಿದ್ರಿ, ದಾವಣಗೆರೆ , ಬೆಳಗಾಂ, ಮೂಲ್ಕಿ ಗಳಲ್ಲಿ ಕಳ್ಳತನ ನಡೆಸಿದ್ದು ಇತ್ತಿಚೆಗೆ ಉಡುಪಿಯ ಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಲ್ಪೆ ಸೋಸೈಟಿ ಯಲ್ಲಿ ನಗದು ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿರುತ್ತಾನೆ. ಆರೋಪಿತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಒಟ್ಟು ನಗದು ರೂ. 4,33,000/-, 2 ಮೋಟಾರ್‌ಸೈಕಲ್‌ಗಳು ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಆರೋಪಿತರ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌. ಆರ್‌, ಪ್ರಸಾದ್‌ಕುಮಾರ್‌, ಎಎಸ್‌ಐ ಜಯಕರ, ಅರುಣ್‌ ಸಿಬ್ಬಂದಿಯವರಾದ ಲೋಕೇಶ್‌, ಸಂತೋಷ ರಾಠೋಡ್, ಬಾಲಕೃಷ್ಣ, ರಿಯಾಜ್‌ ಅಹಮ್ಮದ್‌, ರಾಜೇಶ್‌, ದೇವರಾಜ್‌, ಕಿರಣ್, ಚೇತನ್‌, ಆನಂದ ಗಾಣಿಗ, ವಿಶ್ವನಾಥ ಶೆಟ್ಟಿ, ಹೇಮಂತ್‌, ಕಾರ್ತಿಕ್‌, ಲಿಂಗರಾಜು, ರಾಕೇಶ್‌ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

No Comments

Leave A Comment