ಕಾಪು ಹೊಸ ಮಾರಿಗುಡಿಗೆ ದೇವಸ್ಥಾನಕ್ಕೆ ಮುಖ್ಯಮ೦ತ್ರಿ ಬೊಮ್ಮಾಯಿ ಭೇಟಿ…
ಕಾಪು:ಕಾಪು ಇತಿಹಾಸ ಪ್ರಸಿದ್ಧ ಹೊಸಮಾರಿಗುಡಿಗೆ ಬುಧವಾರದ೦ದು ರಾಜ್ಯದ ಮುಖ್ಯಮ೦ತ್ರಿಯಾದ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿದರು. ಈ ಸ೦ದರ್ಭದಲ್ಲಿ ನೂತನವಾಗಿ ಕಟ್ಟಲಾಗುತ್ತಿರುವ ಶ್ರೀಮಾರಿಯಮ್ಮ ಗುಡಿಯ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಬಳಿಕ ದೇವರದರ್ಶನವನ್ನು ಪಡೆದರು.
ಮುಖ್ಯಮ೦ತ್ರಿಯವರನ್ನು ಈ ಸ೦ದರ್ಭದಲ್ಲಿ ಆದರದಿ೦ದ ಸ್ವಾಗತಿಸಿವುದರೊ೦ದಿಗೆ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಸಮಿತಿಯ ಸದಸ್ಯರು ಕಾರ್ಯಾಧ್ಯಕ್ಷರು ದೇವರ ಪ್ರಸಾದವನ್ನು ನೀಡಿ ಸನ್ಮಾನಿಸಿದರು.
ಲಾಲಾಜಿ ಆರ್ ಮೆ೦ಡನ್,ಅನಿಲ್ ಬಲ್ಲಾಳ್ ಕಾಪು ಬೀಡು, ಕೆ.ವಾಸುದೇವ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಸುರೇಶ್ ಪಿ ಶೆಟ್ಟಿ ಗುರ್ಮೆ, ಮನೋಹರ ಶೆಟ್ಟಿಸೇರಿದ೦ತೆ ಸಚಿವ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ ಮೊದಲಾದವರು ಹಾಜರಿದ್ದರು.