Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

‘ಡಿಕೆಶಿ ದೊಡ್ಡ ಡೀಲ್ ಗಿರಾಕಿ, ಕೋಟಿ-ಕೋಟಿ ಡೀಲ್ ನಡೆಸುತ್ತಾರೆ’: ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಚೇರಿಯಲ್ಲೇ ‘ಕೈ’ ನಾಯಕರ ಗುಸು-ಗುಸು!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಕೋಟಿ ಕೋಟಿ ಡೀಲ್ ನಡೆಯುತ್ತದೆ, ಡಿಕೆ ಶಿವಕುಮಾರ್ ದ್ದು ದೊಡ್ಡ ಸ್ಕ್ಯಾಮ್, ಕಲೆಕ್ಷನ್, ಡೀಲ್  ಗಿರಾಕಿ, ಡಿಕೆಶಿ ಹುಡುಗರ ಬಳಿ 50ರಿಂದ 100 ಕೋಟಿ ರೂಪಾಯಿ ಇದೆ ಅಂದ ಮೇಲೆ ಇವರ ಬಳಿ ಎಷ್ಟಿರಬೇಡ, ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ ಎಂದು ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ವೇದಿಕೆಯಲ್ಲಿ ಮಾತನಾಡಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡರಾದ ವಿ ಎಸ್ ಉಗ್ರಪ್ಪ ಮತ್ತು ಸಲೀಂ ವೇದಿಕೆಯಲ್ಲಿ ಮಾತನಾಡಿರುವುದು ಸುದ್ದಿ ಚಾನೆಲ್ ಗಳ ರೆಕಾರ್ಡ್ ನಲ್ಲಿ ದಾಖಲಾಗಿದ್ದು ಕಾಂಗ್ರೆಸ್ ಮತ್ತು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.ವೇದಿಕೆಯಲ್ಲಿಯೇ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಅಸಮಾಧಾನ ಸ್ಫೋಟವಾಗಿದೆ.

ಸಿದ್ದರಾಮಯ್ಯನವರು ಮಾತನಾಡುವಾಗ ಅವರ ಬಾಡಿ ಲ್ಯಾಂಗ್ವೇಜ್ ನೋಡಿ, ಖಡಕ್ ಮನುಷ್ಯ, ಡಿ ಕೆ ಶಿವಕುಮಾರ್ ಸಾರ್ವಜನಿಕವಾಗಿ ಮಾತನಾಡುವಾಗ ಬಹಳ ಎಮೋಷನಲ್ ಆಗುತ್ತಾರೆ, ದೊಡ್ಡ ಡೀಲ್ ಗಿರಾಕಿ, ಸಾರ್ವಜನಿಕವಾಗಿ ಮಾತನಾಡುವಾಗ ತೊದಲುತ್ತಾರೆ, ಡ್ರಿಂಕ್ಸ್ ಮಾಡುತ್ತಾರಾ, ಅವರು ಡ್ರಿಂಕ್ಸ್ ಮಾಡಲ್ವಲ್ಲ ಲೋ ಬಿಪಿ ಇರ್ಬೇಕು ಎಂದು ಸಲೀಂ ವೇದಿಕೆಯಲ್ಲಿ ವಿ ಎಸ್ ಉಗ್ರಪ್ಪ ಕಿವಿಯಲ್ಲಿ ಹೇಳುತ್ತಾರೆ.

ಆಗ ವಿ ಎಸ್ ಉಗ್ರಪ್ಪ, ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಕೊಡಿಸಿದ್ದು ನಾವು ಎಂದು ಹೇಳಿರುವುದೆಲ್ಲ ಆಡಿಯೊ-ವಿಡಿಯೊದಲ್ಲಿ ದಾಖಲಾಗಿದೆ.

ಈ ಬಗ್ಗೆ ಮಾಧ್ಯಮಗಳು ನಂತರ ಪ್ರತಿಕ್ರಿಯೆ ಕೇಳಿದಾಗ, ಸಲೀಂ ಏನೇ ಹೇಳಿರಬಹುದು, ಅದಕ್ಕೆ ನಾನು ಪ್ರತಿಕ್ರಿಯೆ ನೀಡಲಿಲ್ಲ, ಡಿ ಕೆ ಶಿವಕುಮಾರ್ ಬಗ್ಗೆ ನನಗೆ ಗೌರವವಿದೆ, ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಅವರ ವಿರುದ್ಧವಾಗಿ ಏನೇ ಹೇಳಿದ್ದರೂ ಸಾಬೀತಾದರೆ ಸಾರ್ವಜನಿಕ ಬದುಕಿಗೆ ರಾಜಕೀಯ ನೀಡುತ್ತೇನೆ, ಸಲೀಂ ಹೇಳಿಕೆಗೆ ನಾನು ಅಪ್ಪಿತಪ್ಪಿಯೂ ಸಲೀಂ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ವಿ ಎಸ್ ಉಗ್ರಪ್ಪ ಹೇಳಿದ್ದಾರೆ.

No Comments

Leave A Comment