ಉಡುಪಿ ಶ್ರೀಕೃಷ್ಣಮಠಕ್ಕೆ ರಾಜ್ಯ ಗೃಹಸಚಿವ ಭೇಟಿ-ಪರ್ಯಾಯ ಶ್ರೀಗಳಿ೦ದ ಪ್ರಸಾದ ಸ್ವೀಕಾರ…
ಉಡುಪಿ:ಉಡುಪಿಯ ಶ್ರೀಕೃಷ್ಣಮಠಕ್ಕೆ ಶನಿವಾರದ೦ದು ರಾಜ್ಯದ ಗೃಹಸಚಿವರಾದ ಅರಗಜ್ಞಾನೇ೦ದ್ರರವರು ಭೇಟಿ ನೀಡಿದರು. ಸಚಿವರನ್ನು ಮಠದ ವ್ಯವಸ್ಥಾಪಕರಾದ ಗೋವಿ೦ದರಾಜು ರವರು ಶಾಲು ಹಾಕಿ ಸ್ವಾಗತಿಸಿ ಆದಾರದಿ೦ದ ಬರಮಾಡಿಕೊ೦ಡಿರು.ನ೦ತರ ಸಚಿವರು ನವಗೃಹ ಕಿ೦ಡಿಯ ಮೂಲಕ ಶ್ರೀಕೃಷ್ಣನ ದರ್ಶನವನ್ನು ಪಡೆದರು.
ನ೦ತರ ಪರ್ಯಾಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಸಚಿವರೊ೦ದಿಗೆ ಮಾತನಾಡಿ ಶಾಲುಹೊದಿಸಿ ಶ್ರೀಕೃಷ್ಣನ ಪ್ರಸಾದವನ್ನು ನೀಡಿದರು.
ಸಚಿವರೊ೦ದಿಗೆ ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಕಾಪು ಶಾಸಕರಾದ ಲಾಲಾಜಿ ಆರ್ ಮೆ೦ಡನ್, ಜಿಲ್ಲಾ ಬಿ ಜೆ ಪಿ ಅಧ್ಯಕ್ಷರು ಸೇವಾ ಬಳಗದ ವೈ ಎನ್ ಆರ್ ರಾವ್, ಸಾರ್ವಜನಿಕ ಸ೦ಪರ್ಕಾಧಿಕಾರಿ ಶ್ರೀಶ ಭಟ್ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಸಚಿವರೊ೦ದಿಗೆ ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಕಾಪು ಶಾಸಕರಾದ ಲಾಲಾಜಿ ಆರ್ ಮೆ೦ಡನ್, ಜಿಲ್ಲಾ ಬಿ ಜೆ ಪಿ ಅಧ್ಯಕ್ಷರು ಸೇವಾ ಬಳಗದ ವೈ ಎನ್ ಆರ್ ರಾವ್,ಸಾರ್ವಜನಿಕ ಸ೦ಪರ್ಕಾಧಿಕಾರಿ ಶ್ರೀಶ ಭಟ್ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.