Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಆರ್ಯನ್​ ಜಾಮೀನು ಅರ್ಜಿ ವಜಾ ಮಾಡಿದ ಮುಂಬೈ ಕೋರ್ಟ್​

ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು (ಅಕ್ಟೋಬರ್ 08) ಮುಂಬೈನ ನ್ಯಾಯಾಲಯದಲ್ಲಿ ನಡೆಯಿತು. 23 ವರ್ಷದ ಆರ್ಯನ್ ಪರ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಆರ್ಯನ್ ಖಾನ್ ಅವರ ಎನ್​ಸಿಬಿ ಕಸ್ಟಡಿಯ ಅವಧಿಯು ಇಂದಿಗೆ ಮುಗಿದಿದ್ದು, ನ್ಯಾಯಾಲಯವು ನಿನ್ನೆ (ಅಕ್ಟೋಬರ್ 7) 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಆದ್ದರಿಂದ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ಮಹತ್ವದ್ದಾಗಿತ್ತು. ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಆರ್ಯನ್​ಗೇ ಜಾಮೀನು ನೀಡಿಲ್ಲ. 

ಗುರುವಾರ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್​ಗೆ ಎನ್​ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ಈಗಾಗಲೇ ಅಗತ್ಯವಿದ್ದಷ್ಟು ಸಮಯವನ್ನು ಎನ್​ಸಿಬಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಆರ್​.ಎಂ.ನಿರ್ಲೇಕರ್ ತಿಳಿಸಿದ್ದರು. ನಂತರ ಅವರು ಆರ್ಯನ್ ಖಾನ್ ಸೇರಿದಂತೆ 7 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು. ಈಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿ ಊರ್ಜಿತವಲ್ಲವೆಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ. ಪ್ರಕರಣದ 8 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ. ಸೆಷನ್ ಕೋರ್ಟ್ ಮೊರೆ ಹೋಗಲು ಆರ್ಯನ್ ಖಾನ್ ಪರ ವಕೀಲರು ಈಗ ಚಿಂತನೆ ನಡೆಸಿದ್ದಾರೆ.  ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಕೈಲುಪುತ್ತಿದ್ದಂತೆ ಮೇಲ್ಮನವಿ ಸಲ್ಲಿಸಲು ಪ್ಲಾನ್ ರೂಪಿಸಲಾಗಿದೆ.

ನ್ಯಾಯಾಂಗ ಬಂಧನ ವಿಧಿಸಿದ್ದ ಕಾರಣ, ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಇತರ ಆರೋಪಿಗಳನ್ನು ಮೆಡಿಕಲ್ ಟೆಸ್ಟ್​ಗೆ ಒಳಪಡಿಸಿ ಆರ್ಥರ್ ಜೈಲಿಗೆ ಕರೆದೊಯ್ದಿದ್ದರು. ಇದೀಗ ನ್ಯಾಯಾಲಯದ ಆದೇಶದ ಅನ್ವಯ ಆರ್ಯನ್​ಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ, ಅವರು ಜೈಲಿನಲ್ಲೇ ಇರುವುದು ಅನಿವಾರ್ಯ ಆಗಿದೆ.

No Comments

Leave A Comment