Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಕಲ್ಲಿದ್ದಲು ಕೊರತೆ: ಕರ್ನಾಟಕ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ- ಸುನಿಲ್ ಕುಮಾರ್

ಉಡುಪಿ: ಮಳೆಗಾಲ ಆಗಿರುವುದರಿಂದ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ 10- 15 ದಿನಗಳಿಂದ ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಈ ಸಂಬಂಧ, ಇಂದು ಬೆಳಗ್ಗೆ ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇನೆ. ಮಹಾರಾಷ್ಟ್ರ, ಒಡಿಶಾದಿಂದ ಕಲ್ಲಿದ್ದಲು ಪೂರೈಕೆಯಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಕಲ್ಲಿದ್ದಲು ಅವಲಂಬಿತ ಉಷ್ಣ ವಿದ್ಯುತ್​ ಸ್ಥಾವರ ಸ್ಥಗಿತ ವಿಚಾರವಾಗಿ ಉಡುಪಿಯಲ್ಲಿ ಇಂಧನ ಸಚಿವ ವಿ.ಸುನಿಲ್ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬಳ್ಳಾರಿ, ರಾಯಚೂರಿನಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗಿವೆ. 2 ಘಟಕಗಳಿಗೆ ಶೀಘ್ರದಲ್ಲೇ ಕಲ್ಲಿದ್ದಲು ಪೂರೈಕೆ ಮಾಡುತ್ತೇವೆ. ಇಂದು ರಾತ್ರಿ ಕೇಂದ್ರ ಸಚಿವರ ಜತೆ ಮತ್ತೊಮ್ಮೆ ಮಾತಾಡುವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿದ್ದು ಕ್ರಮ ಕೈಗೊಳ್ತಾರೆ ಎಂದು ಸಚಿವ ವಿ. ಸುನಿಲ್ ಕುಮಾರ್​ ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ
ಜಾಗತಿಕ ಮಟ್ಟದಲ್ಲೇ ಕಲ್ಲಿದ್ದಲು ಕೊರತೆ ಉಂಟಾಗಿರುವುದರಿಂದ ಬೇಡಿಕೆ ವಿಪರೀತ ಹೆಚ್ಚಾಗಿದೆ. ಇದರಿಂದ ಭಾರತ ಕೂಡ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವವಾದ ಆದೇಶವೊಂದನ್ನು ನೀಡಲಾಗಿದೆ. ಇಲ್ಲಿಯ ತನಕ ಸ್ವಂತ ಬಳಕೆಗಾಗಿ (ಇವುಗಳನ್ನು Captive Mines ಎನ್ನಲಾಗುತ್ತದೆ) ಕಲ್ಲಿದ್ದಲು ಬಳಸುತ್ತಿದ್ದ ಅವುಗಳು ಇನ್ನು ಮುಂದೆ ವಾರ್ಷಿಕ ಉತ್ಪಾದನೆಯಲ್ಲಿ ಶೇಕಡಾ 50ರಷ್ಟನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಲ್ಲಿದ್ದಲು ಸಚಿವಾಲಯದಿಂದ ಅಕ್ಟೋಬರ್ 5ನೇ ತಾರೀಕಿನ ಮಂಗಳವಾರದಂದು ಘೋಷಣೆ ಮಾಡಲಾಗಿದೆ. ಅಂದ ಹಾಗೆ, ಭಾರತದಲ್ಲಿ ಈ ಹಿನ್ನೆಲೆಯಲ್ಲಿ ವಿವಿಧ ಸಿಮೆಂಟ್​ ಕಂಪೆನಿಗಳು ಬೆಲೆ ಹೆಚ್ಚಳ ಮಾಡಿದ್ದು, ಶೇ 20ಕ್ಕೂ ಹೆಚ್ಚು ದರ ಮೇಲೇರಿದೆ. ಇದೇ ವೇಳೆ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸುವ ಉಕ್ಕಿನ ದರ ಕೂಡ ಹೆಚ್ಚಳವಾಗಿದೆ.

ಕಲ್ಲಿದ್ದಲು ಸಚಿವಾಲಯವು ಹೇಳಿಕೆಯನ್ನು ನೀಡಿ, ಕಲ್ಲಿದ್ದಲು ಅಥವಾ ಲಿಗ್ನೈಟ್ ಮಾರಾಟದ ದೃಷ್ಟಿಯಿಂದ ಖನಿಜ ವಿನಾಯಿತಿ ನಿಯಮಾವಳಿ, 1960 ಇದಕ್ಕೆ ತಿದ್ದುಪಡಿ ತರಲಾಗಿದೆ. ಭೋಗ್ಯಕ್ಕೆ ಪಡೆದವರು ಕ್ಯಾಪ್ಟಿವ್ ಗಣಿಗಳಿಗೆ ಹೆಚ್ಚುವರಿಯಾಗಿ ಮೊತ್ತವನ್ನು ಪಾವತಿ ಮಾಡಿ, ಒಂದು ಹಣಕಾಸು ವರ್ಷದಲ್ಲಿ ಉತ್ಪಾದನೆ ಮಾಡಿದ ಶೇ 50ರ ತನಕದ ಒಟ್ಟಾರೆ ಕಲ್ಲಿದ್ದಲು ಅಥವಾ ಲಿಗ್ನೈಟ್, ಅದು ಕೂಡ ಆ ಗಣಿಗೆ ಜೋಡಣೆಯಾದ ಘಟಕ ಸಂಪೂರ್ಣ ಬಳಕೆ ಅಗತ್ಯಗಳು ಪೂರೈಸಿದ ಮೇಲೆ ಮಾರಾಟ ಮಾಡಬಹುದು ಎಂದು ತಿಳಿಸಲಾಗಿದೆ.

No Comments

Leave A Comment