Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ತಂದೆಯಿಂದ ಶೂಟೌಟ್ ಪ್ರಕರಣ: ಚಿಕಿತ್ಸೆ ಫಲಿಸದೆ ಮಗ ಸಾವು

ಮಂಗಳೂರು: ಇತ್ತೀಚೆಗೆ ತಂದೆಯೇ ತನ್ನ ಮಗನ ಮೇಲೆ ಫೈರಿಂಗ್ ಮಾಡಿದ್ದ ಘಟನೆ ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಕಾರ್ಗೋ ಸಂಸ್ಥೆಯಲ್ಲಿ ನಡೆದಿತ್ತು. ಇದೀಗ ಚಿಂತಾಜನಕ ಸ್ಥಿತಿಯಲ್ಲಿದ್ದ ಮಗ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ.

ಸುಧೀಂದ್ರ ಪ್ರಭು(14) ಮೃತ ಬಾಲಕ. ತಂದೆ ರಾಜೇಶ್ ಪ್ರಭು, ಮಗನ ಮೇಲೆ ಗುಂಡು ಹಾರಿಸಿದ್ದರು.

ಅಕ್ಟೋಬರ್​ 5ರಂದು ವೇತನದ ವಿಚಾರಕ್ಕೆ ಮಾಲೀಕ ರಾಜೇಶ್ ಪ್ರಭು ಬಳಿ ಇಬ್ಬರು ಸಿಬ್ಬಂದಿ ಜಗಳವಾಡಿದ್ದರು. ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ರಾಜೇಶ್ ಜೊತೆ ಗಲಾಟೆ ಮಾಡಿದ್ದರು. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಹಾಗೂ ಇಬ್ಬರು ಸಿಬ್ಬಂದಿ ಮಧ್ಯೆ ಕಚೇರಿ ಹೊರಗೆ ಹೊಡೆದಾಟ ನಡೆದಿದೆ. ಆಗ ಕಚೇರಿ ಒಳಗಿನಿಂದ ತಮ್ಮ ಲೈಸೆನ್ಸ್ ರಿವಾಲ್ವರ್ ಹಿಡಿದು ಹೊರಬಂದ ರಾಜೇಶ್, ರಿವಾಲ್ವರ್ ಹಿಡಿದು ಸಿಬ್ಬಂದಿ ಮೇಲೆ ಕೈಹಾಕಿ ಜಗಳವಾಡಿದ್ದರು. ಈ ವೇಳೆ ಏಕಾಏಕೀ ರಿವಾಲ್ವರ್​ನಿಂದ ಗುಂಡು ಹಾರಿ ಸುಧೀಂದ್ರ ತಲೆ ಸೀಳಿ ಮೆದುಳಿನ ಭಾಗಕ್ಕೆ ಹೊಕ್ಕಿತ್ತು.

ಗಂಭೀರ ಸ್ಥಿತಿಯಲ್ಲಿದ್ದ ಸುಧೀಂದ್ರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಸುಧೀಂದ್ರ ಮೃತಪಟ್ಟಿದ್ದಾನೆ.

ಕಚೇರಿ ಹೊರಭಾಗದ ಸಿಸಿಟಿವಿಯಲ್ಲಿ ಚಲನವಲನಗಳು ಸೆರೆಯಾಗಿದ್ದು, ಘಟನೆ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ರಾಜೇಶ್ ಪ್ರಭು ಮಾಹಿತಿ ನೀಡಿದ್ದಾರೆ. ವೈಷ್ಣವಿ ಖಾರ್ಗೋ ಲಿಮಿಟೆಡ್ ಕಂಪನಿ‌ ಮಾಲೀಕ ರಾಜೇಶ್ ಪ್ರಭು ಅನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

No Comments

Leave A Comment