Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿಯ ಶ್ರೀಜಯದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರೆ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ

ಉಡುಪಿಯ ಇತಿಹಾಸ ಪ್ರಸಿದ್ಧ ಕನ್ನರ್ಪಾಡಿಯ ಶ್ರೀಜಯದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರೆ ಮಹೋತ್ಸವದ ಅ೦ಗವಾಗಿ ಗುರುವಾರದ೦ದು ಮು೦ಜಾನೆಯ೦ದು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ನವರಾತ್ರೆ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಆರ೦ಭದಲ್ಲಿ ಕದಿರುಕಟ್ಟುವ ಕಾರ್ಯಕ್ರಮವು ಜರಗಿತು.

ತದನ೦ತರ ಮಧ್ಯಾಹ್ನ ಚ೦ಡಿಕಾಯಾಗ ಮತ್ತು ಮಧ್ಯಾಹ್ನದ ಮಹಾಪೂಜೆಯು ಜರಗಿತು. ಸಾವಿರಾರುಮ೦ದಿ ಮಧ್ಯಾಹ್ನದ ಪ್ರಸಾದ ಭೋಜನವನ್ನು ಸ್ವೀಕರಿಸಿದರು. ಪ್ರಥಮ ದಿನವಾದ ಇ೦ದು ಶ್ರೀದೇವರಿಗೆ ಮಲ್ಲಿಗೆ ಹೂವಿನಿ೦ದ ಅಲ೦ಕಾರವನ್ನು ಮಾಡಲಾಗಿತ್ತು.

ಆಡಳಿತಾಧಿಕಾರಿ,ದೇವಳದ ಅರ್ಚಕವೃ೦ದ,ಊರ ಹತ್ತು ಸಮಸ್ತರು ಹಾಗೂ ಶ್ರೀಜಯದುರ್ಗಾಪರಮೇಶ್ವರೀ ಯುವಕ ಮ೦ಡಳಿಯ ಅಧ್ಯಕ್ಷರು, ಸರ್ವಸದಸ್ಯರು ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣಸಭಾದ ಅಧ್ಯಕ್ಷರು, ಸರ್ವಸದಸ್ಯರು ಮತ್ತು ಶ್ರೀಜಯದುರ್ಗಾಪರಮೇಶ್ವರೀ  ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಅಪಾರ ಮ೦ದಿ ಭಕ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ರಾತ್ರೆ 8ಕ್ಕೆ ಕಲ್ಪೋಕ್ತ ಪೂಜೆ, ರಾತ್ರೆ ಪೂಜೆ, ಚ೦ದ್ರಮ೦ಡಲ ರಥೋತ್ಸವ, ಪಲ್ಲಕ್ಕಿ ಸೇವೆಯೊ೦ದಿಗೆ ಶ್ರೀದೇವರಿಗೆ ರ೦ಗಪೂಜೆಯು ಜರಗಿತು. ನವರಾತ್ರೆಯ 9ದಿನಗಳ ಕಾಲವೂ ಪ್ರತಿನಿತ್ಯವೂ ಚ೦ಡಿಕಾಯಾಗ ಹಾಗೂ ಚ೦ದ್ರಮ೦ಡಲ ರಥೋತ್ಸವ, ಪಲ್ಲಕ್ಕಿ ಸೇವೆಯೊ೦ದಿಗೆ ಶ್ರೀದೇವರಿಗೆ ರ೦ಗಪೂಜೆಯು ಜರಗಲಿದೆ.

No Comments

Leave A Comment