Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ನಗರದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: ಐವರ ಬಂಧನ, 11 ಮಕ್ಕಳ ರಕ್ಷಣೆ

ಬೆಂಗಳೂರು: ಅಸಹಾಯಕ ಪೋಷಕರಿಂದ ನವಜಾತ ಶಿಶುಗಳನ್ನು ಪಡೆದು ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಪಶ್ಚಿಮ ವಲಯದ ಮಾನವ ಕಳ್ಳ ಸಾಗಾಣಿಕೆ ನಿಗ್ರಹ ಘಟಕ ಪತ್ತೆ ಹಚ್ಚಿ ಮೂವರು ಮಹಿಳೆಯರು ಸೇರಿದಂತೆ 5 ಮಂದಿ ರಾಜ್ಯ ಮತ್ತು ಅಂತರರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ರಂಜನಾ ದೇವಿದಾಸ್ ಖಂಡಗಳೆ (32), ಬೆಂಗಳೂರಿನ ವಿದ್ಯಾರಣ್ಯ ಪುರದ ದೇವಿ (26), ಜಾಲಹಳ್ಳಿಯ ಮಲ್ಲಸಂದ್ರ ನಿವಾಸಿ ಧನಲಕ್ಷ್ಮೀ (30), ಕತ್ರಿಗುಪ್ಪೆಯ ರಂಗಪ್ಪ ಲೇಔಟ್ ನಿವಾಸಿ ಮಹೇಶ್‍ಕುಮಾರ್ (50)ಮತ್ತು ತಮಿಳುನಾಡಿನ ಜನಾರ್ಧನ್ (33) ಬಂಧಿತ ಆರೋಪಿಗಳು. ಆರೋಪಿಗಳ ಜಾಲದಲ್ಲಿ ಸಿಲುಕಿದ್ದ 12 ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಪೋಷಕರನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಲಾಗಿರುತ್ತದೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಹಾಗೂ ಈ ಜಾಲದಲ್ಲಿ ಸಿಲುಕಿರುವ ಇತರೆ ಮಕ್ಕಳನ್ನು ಪತ್ತೆ ಮಾಡಿ ಸಂರಕ್ಷಿಸುವ ಕಾರ್ಯ ಮುಂದುವರೆದಿದೆ. ವಿಲ್ಸನ್‍ಗಾರ್ಡನ್ ನಿವಾಸಿ ದೇವಿ ಎಂಬುವವರು ಬಾಂಬೆಯಿಂದ ಮಕ್ಕಳನ್ನು ತರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮಾನವ ಕಳ್ಳ ಸಾಗಾಣಿಕೆ ನಿಗ್ರಹ ದಳಕ್ಕೆ ಲಭಿಸಿದೆ.

ಈ ಖಚಿತ ಮಾಹಿತಿ ಮೇರೆಗೆ ಮಾರು ವೇಷದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ನಿನ್ನೆ ರಾತ್ರಿ 8 ಗಂಟೆಯಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಮಗು ಮಾರಾಟ ಮಾಡಲು ಬಂದಿದ್ದ ಆರೋಪಿತೆ ರಂಜನಾ ದೇವಿದಾಸ್ ಖಂಡಗಳೆ ಹಾಗೂ ಖರೀದಿ ಮಾಡಲು ಬಂದಿದ್ದ ದೇವಿ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು.

ಆರೋಪಿ ರಂಜನಾ ವಶದಲ್ಲಿದ್ದ ಒಂದು ತಿಂಗಳ ನವಜಾತ ಹೆಣ್ಣು ಶಿಶುವನ್ನು ರಕ್ಷಿಸಿ, ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿ ಈ ಇಬ್ಬರು ನೀಡಿದ ಹೇಳಿಕೆ ಮೇರೆಗೆ ಉಳಿದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಇವರು ನೀಡಿದ ಸುಳಿವಿನ ಮೇರೆಗೆ ಈ ಜಾಲದಲ್ಲಿ ಸಿಲುಕಿದ 11 ಮಕ್ಕಳನ್ನು ಹಾಗೂ ಈ ಮಕ್ಕಳ ಪಾಲನೆ, ಪೋಷಣೆ ಮಾಡುತ್ತಿದ್ದ ಪೋಷಕರನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬಸವನಗುಡಿ ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಮೀನಾಕ್ಷಿ ಅವರನ್ನೊಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಕಳೆದ ವರ್ಷದ ಚಾಮರಾಜಪೇಟೆಯ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಖಾಸಗಿ ಆಶ್ಪತ್ರೆ ವೈದ್ಯೆಯ ಬಂಧನವಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಬಾಡಿಗೆ ತಾಯಿ ನೆಪದಲ್ಲಿ ಜನರಿಗೆ ವಂಚಿಸಿ ಹಣ ಸುಲಿಗೆ ಮಾಡುವ ಜಾಲವೊಂದು ಕಾರ್ಯನಿರ್ವಹಿಸುತ್ತಿರುವ ಮಾಹಿತ ಸಿಕ್ಕಿತು. ಈ ಸುಳುವು ಬೆನ್ನಹತ್ತಿದ್ದಾಗ ರತ್ನಾಳ ತಂಡ ಬೆಳಕಿಗೆ ಬಂದಿತ್ತು.

ಆದರೆ, ಜಾಲತ ಮಾಸ್ಟರ್ ಮೈಂಡ್ ಆಗಿದ್ದ ವಿಜಯನಗರದ ರತ್ನಾ ಕೊರೋನಾದಿಂದ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿತ್ತು.

ರತ್ನಾಳ ತಂಡ ಬಾಡಿಗೆ ತಾಯಿ ಪೂರೈಸುತ್ತಿದ್ದು. ರತ್ನಾ ಸಾವಿನ ಬಳಿಕ ಈ ಜಾಲವನ್ನು ದೇವಿ ನಿಯಂತ್ರಿಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐವಿಎಫ್ ಕೇಂದ್ರಗಳಲ್ಲಿ ರಂಜನಾ ಹಾಗೂ ದೈವಿ ಸೇರಿದಂತೆ ಐವರು ಆರೋಪಿಗಳು ಬಾಡಿಗೆ ತಾಯಿ ಕಲ್ಪಿಸುವ ಏಜೆಂಟ್ ಗಳಾಗಿದ್ದರು. ಸಂತಾನ ಭಾಗ್ಯವಿಲ್ಲದ ಕೆಲ ದಂಪತಿ, ಐವಿಎಫಅ ಕೇಂದ್ರಗಳಲ್ಲಿ ಬಾಡಿಗೆ ತಾಯಿ ಮೂಲಕ ಮಕ್ಕಳ ಪಡೆಯಲು ಮುಂದಾಗುತ್ತಿದ್ದರು. ಐವಿಎಫ್ ಕೇಂದ್ರಗಳಿಗೆ ಬರುವ ಕೆಲ ದಂಪತಿಯನ್ನು ಸಂಪರ್ಕಿಸಿದ ಆರೋಪಿಗಳು, ನಿಮಗೆ ಒಳ್ಳೆಯ ಆರೋಗ್ಯವಂತ ಮಹಿಳೆಯನ್ನು ಬಾಡಿಗೆ ತಾಯಿಯಾಗಿ ಕೊಡಿಸುತ್ತೇವೆ ಎಂದು ಹೇಳಿತ್ತಿದ್ದರು. ಇದಕ್ಕೆ ಒಪ್ಪಿದ ದಂಪತಿಯಿಂದ ಲಕ್ಷಾಂತರ ಹಣ ಪಡೆಯುತ್ತಿದ್ದರು.

ಬಳಿಕ ಆರೋಪಿಗಳು, ಬಾಡಿಗೆ ತಾಯಿ ಮೂಲಕ ದಂಪತಿಗೆ ಮಕ್ಕಳನ್ನು ನೀಡುತ್ತಿರಲಿಲ್ಲ. ಬದಲಿಗೆ ಮುಂಬೈ, ತಮಿಳುನಾಡು ಹಾಗೂ ಕರ್ನಾಟಕ ಸೇರಿ ಇತರೆಗೆ ಬಡವರಿಗೆ ಹಣ ನೀಡಿ ನಜವಾತ ಶಿಶುಗಳನ್ನು ಖರೀದಿಸಿ, ದಂಪತಿಗೆ ನಿಮ್ಮ ವೀರ್ಯದಿಂದಲೇ ಜನಿಸಿದ ಮಗುವೆಂದು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

No Comments

Leave A Comment