Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಲಖೀಂಪುರ್ ಖೇರಿ: ಲಖನೌ ಏರ್ ಪೋರ್ಟ್ ನಲ್ಲಿ ರಾಹುಲ್ ಗಾಂಧಿಗೆ ತಡೆ, ಮೃತರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಛತ್ತೀಸ್ ಘಡ ಸಿಎಂ

ಲಖನೌ: ಪ್ರಿಯಾಂಕಾ ಗಾಂಧಿ ಬೆನ್ನಲ್ಲೇ ಇತ್ತ ರಾಹುಲ್ ಗಾಂಧಿ ಪ್ರವೇಶಕ್ಕೂ ಉತ್ತರ ಪ್ರದೇಶ ಪೊಲೀಸರು ತಡೆ ಹಾಕಿದ್ದು, ಲಖನೌ ಏರ್ ಪೋರ್ಟ್ ನಲ್ಲೇ ಕಾಂಗ್ರೆಸ್ ನಾಯಕನಿಗೆ ತಡೆವೊಡ್ಡಿದ್ದಾರೆ.

ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಬಳಿಕ ಉತ್ತರ ಪ್ರದೇಶ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಲಖೀಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಖನೌಗೆ ಆಗಮಿಸಿದ್ದು, ಲಖೀಂಪುರ್ ಖೇರಿಗೆ ಭೇಟಿ ನೀಡಲು ಯತ್ನಿಸಿದ್ದಾರೆ. ಈ ವೇಳೆ ಅವರಿಗೆ ಹಲವು ಕಾಂಗ್ರೆಸ್ ನಾಯಕರೂ ಕೂಡ ಸಾಥ್ ನೀಡುತ್ತಿದ್ದಾರೆ.

ಏತನ್ಮಧ್ಯೆ ಲಖನೌ ವಿಮಾನ ನಿಲ್ಗಾಣಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದು, ಈ ವೇಳೆ ಅವರನ್ನು ವಿಮಾನ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ.  ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನನಗೆ ಉತ್ತರ ಪ್ರದೇಶ ಸರ್ಕಾರ ಎಂತಹ ಅನುಮತಿ ನೀಡಿದೆ ಎಂದು ತಿಳಿಯುತ್ತಿಲ್ಲ. ಗೃಹ ಇಲಾಖೆ ಲಖೀಂಪುರಕ್ಕೆ ಹೋಗಲು ಅನುಮತಿ ನೀಡಿದೆ ಎನ್ನಲಾಗಿದೆ. ಆದರೆ ಇಲ್ಲಿ ನನಗೆ ಲಖೀಂಪುರ್ ಖೇರಿಗೆ ತೆರಳಲು ಬಿಡುತ್ತಿಲ್ಲ. ನಾನು ನನ್ನ ಸ್ವಂತ ವಾಹನದಲ್ಲೇ ತೆರಳು ಸಿದ್ಧ. ನಮಗೆ ಅದೆತಂಹ ಅನುಮತಿ ನೀಡಿದ್ದಾರೆ ಎಂಬುದು ತಿಳಿಯಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

50 ಲಕ್ಷ ರೂ ಪರಿಹಾರ ಘೋಷಣೆ
ಇನ್ನು ಅದೇ ತಂಡದಲ್ಲಿದ್ದ ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮೃತ ರೈತರ ಕುಟುಂಬಕ್ಕೆ ಮತ್ತು ಎಸ್ ಯುವಿನಿಂದಾಗಿ ಸಾವಿಗೀಡಾದ ಪತ್ರಕರ್ತನ ಕುಟುಂಬಕ್ಕೆ ತಲಾ 50 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್ ಅವರು ಉಪಸ್ಥಿತರಿದ್ದಾರೆ.

No Comments

Leave A Comment