ಅಕ್ಟೋಬರ್ 13ರ೦ದು 5ಕೋಟಿ ರೂ ವೆಚ್ಚದಲ್ಲಿ ಅದಮಾರುವಿನ ಪೂರ್ಣಪ್ರಜ್ಞ ಪದವಿ ಕಾಲೇಜು ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಪಡುಬಿದ್ರಿ: ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ – ಅಧೀನಕ್ಕೊಳಪಟ್ಟ ಅದಮಾರು ಪೂರ್ಣಪ್ರಜ್ಞ ಎಜುಕೇಶನ್ ಸೆಂಟರ್‌ನ ಪೂರ್ಣಪ್ರಜ್ಞ ಪದವಿ ಕಾಲೇಜು ನೂತನ ಕಟ್ಟಡಕ್ಕೆ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅ.13ರಂದು ಬೆಳಗ್ಗೆ 11 ಗಂಟೆಗೆ ಶಿಲಾನ್ಯಾಸ ನೆರವೇರಿಸುವರು.
ಸಭಾ ಕಾರ್ಯಕ್ರಮದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಉಡುಪಿ ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಅದಮಾರು ಎಜುಕೇಶನ್ ಕೌನ್ಸಿಲ್ ಗೌರವ ಕಾರ್ಯದರ್ಶಿ ಶ್ರೀಹರಿ, ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಗೌರವ ಖಜಾಂಚಿ ಪ್ರವೀಣ್‌ಕುಮಾರ್, ಪ್ರಾಂಶುಪಾಲ ಎಂ.ರಾಮಕೃಷ್ಣ ಪೈ, ಉಪಪ್ರಾಂಶುಪಾಲೆ ಡಾ.ಒಟ್ವಿಟಾ ಡಿಸೋಜ ಉಪಸ್ಥಿತರಿರುವರು ಎಂದು ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷರಾದ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ವಕೀಲ ಪ್ರದೀಪ್‌ಕುಮಾರ್ ತಿಳಿಸಿದ್ದಾರೆ.
ಶಿಕ್ಷಣ ಯಜ್ಞ ಗ್ರಾಮೀಣ ವಿದ್ಯಾರ್ಥಿಗಳು ಮುಂದುವರಿಕೆ
ವಿದ್ಯೆಯಿಂದ ವಂಚಿತರಾಗಬಾರದೆಂಬ ಮಹತ್ವಾಕಾಂಕ್ಷೆಯಡಿ ಕೀರ್ತಿಶೇಷ ಶ್ರೀ ವಿಬುಧೇಶ ತೀರ್ಥರು 1950ರಲ್ಲಿ ಆರಂಭಿಸಿರುವ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಸೇರಿದಂತೆ ದೇಶಾದ್ಯಂತ 23 ಶಿಕ್ಷಣ ಈ ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಅವರ ಶಿಷ್ಯರಾದ ಶ್ರೀ ವಿಶ್ವಪ್ರಿಯತೀರ್ಥ 2 ಸ್ವಾಮೀಜಿ ಶಿಕ್ಷಣ ಯಜ್ಞ ಮುಂದುವರಿಸಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ – 49ಕ್ಕೇರಿಸಿ, 50ನೇ ಸಂಸ್ಥೆಗೆ ಮುನ್ನುಡಿ ಇಡುತ್ತಿದ್ದಾರೆ.
ವಿಬುಧೇಶ ನ ತೀರ್ಥರ ಶ್ರೇಯೋಭಿಲಾಷೆಯಂತೆ ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿರುವ ಈ ಪ್ರಸ್ತುತ ಪೀಠಾಧಿಪತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಗ್ರಾಮೀಣ – ಪ್ರದೇಶದಲ್ಲಿ ವಿಶ್ವವಿದ್ಯಾಲಯ ನಿರ್ಮಿಸುವ ಸದುದ್ದೇಶವಿರಿಸಿ ಕಿಂಡರ್ * ಗಾರ್ಟನ್‌ನಿಂದ ಸ್ನಾತಕೋತ್ತರವರೆಗೆ ಶಿಕ್ಷಣ ಸೌಲಭ್ಯ ಒದಗಿಸಲು ಕಟಿಬದ್ಧರಾಗಿದ್ದಾರೆ. ಗುರುಗಳು ಸ್ಥಾಪಿಸಿದ ಮೂಲ ಶಿಕ್ಷಣ ಸಂಸ್ಥೆ ‘ ಸರ್ವತೋಮುಖವಾಗಿ ಕಾರ್ಯಚಟುವಟಿಕೆ ನಿರತವಾಗಿರಬೇಕೆಂಬ ಇರಾದೆಯೊಂದಿಗೆ 18 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿ ಶಿಕ್ಷಣಕ್ಕೆ ಅನುಕೂಲ ಒದಗಿಸಿದ್ದಾರೆ. ಬಿ.ಕಾಂ. ಮತ್ತು ಬಿ.ಸಿ.ಎ. ಡಿಗ್ರಿ ಕೋರ್ಸ್‌ಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒದಗಿಸುವ ಸತ್ ಚಿಂತನೆಯೊಂದಿಗೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮುಂದಡಿ ಇರಿಸಿದ್ದಾರೆ.