ಕುಂಜಿಬೆಟ್ಟು:ಇನಾಯತ್ ಆರ್ಟ್ ಗ್ಯಾಲರಿ ಬೆಳ್ಳಿಯ ಹಬ್ಬ: ಕಲಾವಿದರಿ೦ದ ಚಿತ್ರ ಕಲಾ ಪ್ರದರ್ಶನ
ಉಡುಪಿ: ಇನಾಯತ್ ಆರ್ಟ್ ಗ್ಯಾಲರಿ ಕಟ್ಟೆ ಆಚಾರ್ಯ ಮಾರ್ಗ ಕುಂಜಿಬೆಟ್ಟು ಉಡುಪಿ ಇದರ ಬೆಳ್ಳಿಯ ಹಬ್ಬದ ರಜತ ಮಹೋತ್ಸವ ಅಂಗವಾಗಿ ಪ್ರಸಿದ್ದ ಕಲಾವಿದರ ಚಿತ್ರ ಕಲಾ ಪ್ರದರ್ಶನ ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕಾರ್ಕಳ ಇಂದು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಸಕ ರಘುಪತಿ ಭಟ್ , ಕರಾವಳಿ ಪ್ರಾಧಿಕಾರದ ಅಧ್ಯಕ್ಷ ರಾದ ಮಟ್ಟಾರ್ ರತ್ನಾಕರ್ ಹೆಗಡೆ , ಉಡುಪಿ ನಗರ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ , ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ , ಆರ್ಟ್ ಗ್ಯಾಲರಿಯ ಸ್ಥಾಪಕ ಲಿಯಾಕತ್ ಅಲಿ , ಕರಮತ್ ಆಲಿ, ನರಸಿಂಹ ಮೂರ್ತಿ , ವಿದ್ಯಾರ್ಥಿಗಳು ಉಪಸ್ಥರಿದ್ದರು.