ಗಾ೦ಧೀ ಜಯ೦ತಿ: ಜ್ಞಾನಗಂಗಾ ಕಾಲೇಜು ವಿದ್ಯಾರ್ಥಿಗಳಿ೦ದ ಸ್ವಚ್ಚತಾ ಕಾರ್ಯಕ್ರಮ
ಉಡುಪಿ:ಗಾಂಧಿ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಜ್ಞಾನಗಂಗಾ ಕಾಲೇಜಿನ ಸುತ್ತಮುತ್ತಲಿನ ಆವರಣದಲ್ಲಿ ಮತ್ತು ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು.
ಮೂಡುಬೆಳ್ಳೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸುಧಾಕರ ಪೂಜಾರಿ ಹಾಗೂ ಸ್ಥಳೀಯ ಉದ್ಯಮಿ ಹಾಗೂ ಪೋಷಕರಾದ ನಿರಂಜನ್ ಬೆಳ್ಳೆ ಇವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಯು.ಎಲ್ ಭಟ್ ರವರು ಬಂದ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ನೂತನ ನಾಯಕನಾಗಿ ಆಯ್ಕೆಯಾದ ಕುಮಾರ ಅನುಜ್ ಮತ್ತು ನಾಯಕಿಯಾಗಿ ಆಯ್ಕೆಯಾದ ಕುಮಾರಿ ನವ್ಯ ಉಪಸ್ಥಿತರಿದ್ದರು.
ಸುಧಾಕರ ಪೂಜಾರಿಯವರು ಗಾಂಧೀಜಿಯ ಸ್ವಚ್ಛತಾ ಪರಿಕಲ್ಪನೆಯ ಕುರಿತು ತಿಳಿಸುತ್ತ ಕೊರೋನ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಆದಷ್ಟು ಹೆಚ್ಚಿನ ಜಾಗೃತೆ ವಹಿಸುವಂತೆ ಎಚ್ಚರಿಸಿದರು.
ತದನಂತರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳನ್ನು 4 ತಂಡಗಳಾಗಿ ವಿಂಗಡಿಸಿ ಉಪನ್ಯಾಸಕ ಮಾರ್ಗದರ್ಶನದಲ್ಲಿ 2ತಂಡ ನೆಲ್ಲಿಕಟ್ಟೆಯಿಂದ ಕುಂತಳ ನಗರದವರೆಗೆ ಹಾಗೂ ಇನ್ನೆರಡು ತಂಡ ನೆಲ್ಲಿಕಟ್ಟೆಯಿಂದ ಮೂಡುಬೆಳ್ಳೆಯವರೆಗೆ ಪ್ಲಾಸ್ಟಿಕ್ ಹೆಕ್ಕುವುದರವುದರೊ೦ದಿಗೆ ಕಾಲೇಜಿನ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು.