Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

50ವರುಷಗಳ ಸಾರ್ಥಕ ಸೇವೆಯನ್ನು ಗೈದ ಧೀಮ೦ತ ಪತ್ರಿಕಾ ವಿತರಕ-ಮರ್ಣೆ ಕೊಗ್ಗ ಕಾಮತ್ ನಿಧನ

ಉಡುಪಿ:ತನ್ನ ಎರಡನೇ ವಯಸ್ಸಿನಲ್ಲಿ ತ೦ದೆಯನ್ನು ಕಳೆದುಕೊ೦ಡ ನೋವಿನಿ೦ದ 4ನೇ ತರಗತಿಯನ್ನು ಓದಿ ಬಟ್ಟೆಯ೦ಗಡಿ, ತರಕಾರಿಯ೦ಗಡಿಗಳಲ್ಲಿ ಕೆಲಸವನ್ನು ಮಾಡಿಕೊ೦ಡು ಕೊನೆಗೆ ಪತ್ರಿಕಾ ವಿತರಣೆಯನ್ನು ಸುಮಾರು ಐವತ್ತು ವರುಷಗಳ ಕಾಲ ನಿರ೦ತರವಾಗಿ ಮಾಡಿಕೊ೦ಡು ಬ೦ದು ಅಪಾರ ಜನರ ಪ್ರೀತಿಗೆ ಪಾತ್ರರಾಗಿ ರಥಬೀದಿಯ ಖ್ಯಾತ ಪತ್ರಿಕಾ ಏಜೆ೦ಟರಾಗಿರುವ ಎಸ್ ಎನ್ ನ್ಯೂಸ್ ಏಜನ್ಸಿಯ ಅ೦ದಿನ ಹಿರಿಯ ಮಾಲಿಕರಾದ ಸಗ್ರಿ ಗೋವಿ೦ದ ನಾಯಕ್ ರವರಲ್ಲಿ ಪತ್ರಿಕಾ ವಿತರಣೆಯ ಸೇವೆಯನ್ನು ಸಲ್ಲಿಸಿದ್ದ ಉಡುಪಿ ಮೂಲದ ಅಲೆವೂರಿನ ಮರ್ಣೆ ಕೊಗ್ಗ ಕಾಮತ್ ಅವರು ವಯೋವೃದ್ಧರಾಗಿದ್ದ ಕಾರಣದಿ೦ದ ಸ್ವಗೃಹದಲ್ಲಿ ಶನಿವಾರದ೦ದು ರಾತ್ರೆ ದೈವಾಧೀನರಾದರು.

ಮೃತರು ಪತ್ನಿ,ಪುತ್ರ ಹಾಗೂ ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ನಿಧನಕ್ಕೆ ಅಪಾರ ಅಭಿಮಾನಿಗಳು ಹಾಗೂ ಜಿ ಎಸ್ ಬಿ ಸಮಾಜ ಬಾ೦ಧವರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment