Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಪರ್ಯಾಯೋತ್ಸವ ಸಮಿತಿ, ಶ್ರೀ ಕೃಷ್ಣಾಪುರ ಮಠ-ಹೊರೆ ಕಾಣಿಕೆ ಸಲ್ಲಿಕೆ :ಬಾಡಿಗೆದಾರರ ಸಭೆ

ಉಡುಪಿ:ತಾ 3.10.2021 ಸಂಜೆ ಶ್ರೀ ಕೃಷ್ಣ ಸಭಾ ಭವನದಲ್ಲಿ ಶ್ರೀ ಮಠದ ಬಾಡಿಗೆದಾರರ ಸಭೆಯು ಅಧ್ಯಕ್ಷರಾದ ಶ್ರೀ ಕೆ ಸೂರ್ಯನಾರಾಯಣ ಉಪಾಧ್ಯ ನೇತೃತ್ವದಲ್ಲಿ ನಡೆಯಿತು.

ಪರಮಾಪೂಜ್ಯರ ಚತುರ್ಥ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಶ್ರೀ ಮಠದ ಬಾಡಿಗೆಯಲ್ಲಿರುವವರು ಅವರವರ ಮಳಿಗೆ, ಅಂಗಡಿ ಮುಂಭಾಗ ದೀಪಾಲಂಕಾರ ಮಾಡುವಿಕೆ , ಹೊರೆ ಕಾಣಿಕೆ ಸಲ್ಲಿಕೆ ಅಲ್ಲದೆ ಪರ್ಯಾಯ ಅವಧಿಯಲ್ಲಿ ಪೂರ್ಣ ರೀತಿಯ ಸಹಕಾರ ನೀಡುವ ಅಭಿಪ್ರಾಯವನ್ನು ಬಾಡಿಗೆದಾರರ ಪರವಾಗಿ, ಸಮಿತಿಯ ಕೋಶಾಧಿಕಾರಿಯವರೂ ಆಗಿರುವ ಪಿ ವಿ ಶೆಣೈ, ಡಾಕ್ಟರ್ ವಿಜಯೇಂದ್ರ, ಮೈಸೂರ್ ಆಯುರ್ವೇದಿಕ್ ಮೆಡಿಕಲ್ , ಡ್ರೆಸ್ ಪ್ಯಾಲೇಸ್, ಮುಕ್ತರ್ ಹುಸೇನ್, ಪಾಪ್ಯುಲರ್ ಸ್ಟೋರ್ಸ್ ಮಾಲೀಕರು ಇವರಲ್ಲದೆ ಇತರ ಪ್ರಮುಖರು ವ್ಯಕ್ತ ಪಡಿಸಿದ ಬಳಿಕ ಶ್ರೀ ಎಂ ಮಾಧವ ಭಟ್ (modern ಇಂಟರಿಯರ್ಸ್ )ಇವರನ್ನು ಸಂಗ್ರಹ ಪ್ರಮುಖರನ್ನಾಗಿ ಮಾಡಲಾಯಿತು.

ರಾಘವೇಂದ್ರ ರಾವ್ ಸ್ವಾಗತಿಸಿ,ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಪರ್ಯಾಯೋತ್ಸವದಲ್ಲಿ ಎಲ್ಲರ ಸಹಭಾಗಿತ್ವದ ಅಗತ್ಯತೆ ಹಾಗೂ ಸಮಗ್ರ ಚಿತ್ರಣ ನೀಡಿ ಬಳಿಕ ಎಲ್ಲರ ಸಹಕಾರ ಕೇಳಿದರು.

ಸಂದರ್ಭದಲ್ಲಿ ಸಮಿತಿಯ ಹೇರಂಜೆ ಕೃಷ್ಣ ಭಟ್, ರಾಮಚಂದ್ರ ಉಪಾಧ್ಯ, ಶ್ರೀಶ ಆಚಾರ್,ರವಿ ಅಮ್ಮ0ಜೆ,ಪ್ರದೀಪ್ ರಾವ್, ಪ್ರವೀಣ್ ಉಪಾಧ್ಯ, ರಮಾ ಕಾಂತ್, ವೈ ಮಂಜುನಾಥ್ ರಾವ್, ರವಿಪ್ರಕಾಶ್ ಉಪಸ್ಥಿತರಿದ್ದರು. ಬಿ ವಿ ಲಕ್ಷ್ಮಿ ನಾರಾಯಣ ಧನ್ಯವಾದನೀಡಿದರು.

No Comments

Leave A Comment