Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಐಪಿಎಲ್ 2021: ಸನ್ ರೈಸರ್ಸ್ ವಿರುದ್ಧ ಕೆಕೆಆರ್ ಗೆ ಆರು ವಿಕೆಟ್ ಭರ್ಜರಿ ಜಯ, ಪ್ಲೇ ಆಫ್ ಕನಸು ಜೀವಂತ

ದುಬೈ: ಸಂಘಟಿತ ಆಟದ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಭಾನುವಾರ ನಡೆದ 14ನೇ ಆವೃತ್ತಿ ಐಪಿಎಲ್ ನ 49ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ, ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 115 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ 19.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಸೇರಿಸಿ ಜಯ ಸಾಧಿಸಿತು. ಅಲ್ಲದೆ 13 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 12 ಅಂಕಗಳನ್ನು ಕಲೆ ಹಾಕಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಗಿಲ್ ನಿತೀಶ್ ರಾಣಾ ಜೊತೆಗೆ ಮೂರನೇ ವಿಕೆಟ್ ಗೆ 55 ರನ್ ಗಳನ್ನು ಜೊತೆಯಾಟದಲ್ಲಿ ಭಾಗಿಯಾದರು. 51 ಎಸೆತಗಳನ್ನು ಎದುರಿಸಿದ ಗಿಲ್ 10 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿದರು.

ಉಳಿದಂತೆ ದಿನೇಶ್ ಕಾರ್ತಿಕ್ 18, ಏಯಾನ್ ಮಾರ್ಗನ್ 2, ವೆಂಕಟೇಶ್ ಅಯ್ಯರ್ 8, ರಾಹುಲ್ ತ್ರಿಪಾಠಿ 7 ರನ್ ಗಳಿಸಿದರು. ಕೆಕೆಆರ್ ಪರ ಸಾಂಘಿಕ ದಾಳಿ ನಡೆಸಿದ ಟಿಮ್ ಸೌಥಿ, ಶಿವಂ ಮಾವಿ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು.

No Comments

Leave A Comment