Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಘೋರಿಗಳನ್ನು ಸ್ಥಳಾಂತರ ಮಾಡುವಂತೆ ಸುನಿಲ್‌ ಕುಮಾರ್‌ ಸೂಚನೆ

ಚಿಕ್ಕಮಗಳೂರು: ದತ್ತಪೀಠದಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು. ಹೈಕೋರ್ಟ್ ನಿರ್ದೇಶನದ ಪರವಾಗಿ ನಾನು ಸೂಚನೆ ನೀಡುತ್ತೇನೆ. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠ ಬೇರೆ, ನಾಗೇನಹಳ್ಳಿಲ್ಲಿರುವ ಬಾಬಾಬುಡನ್ ದರ್ಗಾ‌ ಬೇರೆ. ಈ ವಿಚಾರ ದಾಖಲೆಗಳಲ್ಲಿ ಸಾಬೀತಾಗಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ದತ್ತಪೀಠಕ್ಕೆ ಭೇಟಿ ಕೊಟ್ಟ ಬಳಿಕ ಮಾತನಾಡಿದ ಸಚಿವ ಸುನೀಲ್ ಕುಮಾರ್, ದತ್ತಪೀಠದ ಹೋರಾಟದ ಮೂಲಕವೇ ನಾನು ಗುರುತಿಸಿಕೊಂಡಿದ್ದೇನೆ. ಹೈಕೋರ್ಟ್ ಹಿಂದೂಗಳ ಭಾವನೆಗಳಿಗೆ ಪರವಾದ ತೀರ್ಪನ್ನು ಕೊಟ್ಟಿದೆ. ನಾನು ಮಂತ್ರಿಯಾದ ಸಂದರ್ಭದಲ್ಲಿ ಈ ತೀರ್ಪು ಬಂದಿರುವುದು ನನ್ನ ಜೀವನದ ಯೋಗ ಎಂದು ಸಂತಸಪಟ್ಟರು.

ದತ್ತಪೀಠದಲ್ಲಿ ಹಿಂದುಗಳ ಮೂಲಕವೇ ಪೂಜೆಯಾಗಬೇಕು ಎಂದು ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. ಮುಸಲ್ಮಾನರು ಕಣ್ತೆರೆದು ನೋಡಬೇಕು. ನಿಮ್ಮ ನಾಗೇನಹಳ್ಳಿಯ ದರ್ಗಾವನ್ನು ನೀವು ಅಭಿವೃದ್ಧಿ ಮಾಡಿ. ದತ್ತಪೀಠದಲ್ಲಿ ಮುಜಾವರ್ ಪೂಜೆ ಮಾಡೋದಲ್ಲ, ಹಿಂದೂ ಅರ್ಚಕರು ಪೂಜೆ ಮಾಡಬೇಕೆಂದು ಕೋರ್ಟ್ ಹೇಳಿದೆ. ಹಿಂದೂಗಳ‌ ಭಾವನೆಗಳ ಪರವಾಗಿ ನಮ್ಮ ಸರ್ಕಾರ ನಿಲ್ಲುತ್ತೆ ಎಂದು ತಿಳಿಸಿದರು.
ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ವಿರುದ್ಧದ ನಿರ್ಣಯ ತೆಗೆದುಕೊಂಡಿತು. ಮುಜಾವರ್ ನೇಮಕ ಮಾಡಿ ಹಿಂದೂ ವಿರೋಧಿಯಾಗಿ ನಡೆದುಕೊಂಡಿತು. ಈಗ ನ್ಯಾಯಾಲಯ ನಮ್ಮ ಪರವಾದ ತೀರ್ಪನ್ನು ನೀಡಿದೆ ಎಂದವರು ಅಭಿಪ್ರಾಯಪಟ್ಟರು.
No Comments

Leave A Comment