Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಮಮತಾ ಬ್ಯಾನರ್ಜಿ ಸಿಎಂ ಹುದ್ದೆ ಭದ್ರ: 11ನೇ ಸುತ್ತಿನ ಎಣಿಕೆಯಲ್ಲಿ 34 ಸಾವಿರ ಮತಗಳ ಮುನ್ನಡೆ, ಅಭಿಮಾನಿಗಳ ಹರ್ಷೋದ್ಘಾರ

ಭವಾನಿಪುರ(ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮುಖ್ಯಮಂತ್ರಿ ಪದವಿಯನ್ನು ಭದ್ರಪಡಿಸಿಕೊಳ್ಳುವ ನಿರ್ಧರಿತ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 11ನೇ ಸುತ್ತಿನಲ್ಲಿ 34 ಸಾವಿರ ಮತಗಳ ಭಾರೀ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತಮ್ಮ ನಾಯಕಿ ಗೆಲ್ಲುವುದು ನಿಚ್ಛಳ ಎಂದು ಗೊತ್ತಾಗುತ್ತಿದ್ದಂತೆ ಟಿಎಂಸಿ ಅಭಿಮಾನಿಗಳು ಮೈಗೆ, ಮುಖಕ್ಕೆ ಬಣ್ಣ ಹಚ್ಚಿಕೊಂಡು ಕೋಲ್ಕತ್ತಾದಲ್ಲಿರುವ ಮಮತಾ ನಿವಾಸದ ಮುಂದೆ ಜಮಾಯಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ.

ಮಮತಾ ಬ್ಯಾನರ್ಜಿಯವರ ವಿರುದ್ಧ ಬಿಜೆಪಿಯಿಂದ ಪ್ರಿಯಾಂಕಾ ತಿಬ್ರೆವಾಲ್ ಸ್ಪರ್ಧಿಸಿದ್ದು ಅವರು ಸೋಲುವುದು ಬಹುತೇಕ ಖಚಿತವಾಗಿದೆ. ಸಂಸರ್ ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೂಡ ಟಿಎಂಸಿ ಮುನ್ನಡೆಯಲ್ಲಿದೆ.

No Comments

Leave A Comment