Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ, ತುಮಕೂರಿನ ಯೋಧ ರಂಗಯ್ಯ ಹುತಾತ್ಮ

ತುಮಕೂರು: ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ತುಮಕೂರಿನ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಕೆಲಸ ಮಾಡುತ್ತಿದ್ದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೆ.ಟಿ.ಹಳ್ಳಿಯ ಯೋಧ ರಂಗಯ್ಯ (57) ಹುತಾತ್ಮರಾದವರು.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆ.ಟಿ ಹಳ್ಳಿ ಮೂಲದ ಯೋಧ ರಂಗಯ್ಯ (57) ಗುಂಡು ತಗುಲಿ ವೀರ ಮರಣವನ್ನಪ್ಪಿದ್ದಾರೆ. 35 ವರ್ಷದಿಂದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ರಂಗಯ್ಯ ಪ್ರಸ್ತುತ ಗಡಿ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಗುರುವಾರ ರಾತ್ರಿ ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದ ವೇಳೆ ಗುಂಡಿನ ಚಕಮಕಿಯಲ್ಲಿ ರಂಗಯ್ಯ ಹುತಾತ್ಮರಾಗಿದ್ದಾರೆ. ಇಂದು ಶನಿವಾರ ಯೋಧನ ಪಾರ್ಥಿವ ಶರೀರ ಪಾವಗಡಕ್ಕೆ ಆಗಮನವಾಗುವ ಸಾಧ್ಯತೆಯಿದೆ. ಪಾವಗಡ ತಾಲ್ಲೂಕು ಆಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುವುದು. ರಂಗಯ್ಯ ಹುಟ್ಟೂರು ಕೆ.ಟಿ. ಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

No Comments

Leave A Comment