Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಸಾರಿಗೆ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಪಾಂಗಾಳ ರಬೀಂದ್ರ ನಾಯಕ್ ಇನ್ನಿಲ್ಲ-ಪರ್ಯಾಯ ಶ್ರೀಗಳಿ೦ದ ಹಾಗೂ ಅಪಾರ ಅಭಿಮಾನಿಗಳಿ೦ದ ಸ೦ತಾಪ

ಉಡುಪಿ: ಸಾರಿಗೆ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಪಾಂಗಾಳ ರಬೀಂದ್ರ ನಾಯಕ್ (ಪಿ.ಆರ್. ನಾಯಕ್) ಅ. 2ರಂದು ಶನಿವಾರ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

1992ರ ಫೆ. 9ರಂದು ಉಡುಪಿಯಲ್ಲಿ ಜನಿಸಿದ ನಾಯಕ್, ಮುಂಬಯಿ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಪದವಿಧರರಾಗಿದ್ದರು. 1945-50ರ ಅವಧಿಯಲ್ಲಿ ನವದೆಹಲಿಯ ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್, ಬಳಿಕ ನ್ಯಾಷನಲ್ ಫಿಸಿಕಲ್ ಲ್ಯಾಬೊರೋಟರಿಯಲ್ಲಿ ಟೆಕ್ನಾಲಜಿಸ್ಟ್ ಆಗಿದ್ದರು.

ಸ್ವಲ್ಪ ಕಾಲ ರಾಯಲ್ ಇಂಡಿಯನ್ ನೇವಿಯಲ್ಲಿ ತಾಂತ್ರಿಕ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.

1951ರಲ್ಲಿ ಸಾರಿಗೆ ಉದ್ಯಮ ಪ್ರವೇಶಿಸಿದ ಅವರು, ಹನುಮಾನ್ ಟ್ರಾನ್ಸ್ ಪೋರ್ಟ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ, 1972ರಿಂದ ವ್ಯವಸ್ಥಾಪಕ ನಿರ್ದೇಶಕರಾಗಿ ಅನೇಕ ವರ್ಷ ಕಾಲ ಯಶಸ್ವಿಯಾಗಿ ಉದ್ದಿಮೆ ನಡೆಸಿದರು. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಸಾರಿಗೆ ಸಂಪರ್ಕ ಒದಗಿಸಿದ ಕೀರ್ತಿ ಪಿ. ಆರ್. ನಾಯಕ್ ಅವರಿಗೆ ಸಲ್ಲುತ್ತದೆ.

ಸ್ವಲ್ಪ ಕಾಲ ಸಾಗರದ ಗಜಾನನ ಮೋಟಾರ್ ಟ್ರಾನ್ಸ್ ಪೋರ್ಟ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದರು.
ಶ್ರೇಷ್ಠ ದಾನಿ ಹಾಗೂ ಸಮಾಜಸೇವಕರಾಗಿದ್ದ ಅವರು, ಉಡುಪಿ ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದರು. ಜಿಲ್ಲಾಡಳಿತ ನೀಡಿದ್ದ ಪ್ರತಿಷ್ಠಿತ ಉಡುಪಿ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.

ಪೇಜಾವರ ಶ್ರೀ ಸಾನ್ನಿಧ್ಯದಲ್ಲಿ ಪಿ. ಆರ್. ನಾಯಕ್ ಅವರಿಗೆ ಪಾಂಗಾಳಾಭಿವಂದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪಾಂಗಾಳ ರಬೀಂದ್ರ ನಾಯಕ್ ನಿಧನಕ್ಕೆ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.

ಪರ್ಯಾಯ ಶ್ರೀಗಳಿ೦ದ ಸ೦ತಾಪ ಸೂಚನೆ….
ಪಾಂಗಾಳ ರಬೀಂದ್ರ ನಾಯಕ್ ರವರು ನಮ್ಮ ಗುರುಗಳಾದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಕಾಲದಿಂದಲೂ ಹಲವು ದಶಕಗಳ ಕಾಲ ಅದಮಾರು ಮಠ ಎಜುಕೇಶನ್ ಕೌನ್ಸಿಲ್‌ನ ಸಕ್ರಿಯ ಸದಸ್ಯರಾಗಿದ್ದು, ಸಮಾಜ ಸೇವೆಗಳಲ್ಲಿ ಗುರುಗಳ ಜೊತೆ ತೊಡಗಿಸಿಕೊಂಡಿದ್ದರು. ಇಂದು ಹರಿಪಾದಗೈದ ಪಾಂಗಾಳ ರವೀಂದ್ರ ನಾಯಕ್ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲೆಂದು ಅದಮಾರು ಮಠದ ಎಜುಕೇಶನ್ ಕೌನ್ಸಲ್ ಅಧ್ಯಕ್ಷರು ಮತ್ತು ಪರ್ಯಾಯ ಶ್ರೀ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪೊಡವಿಗೊಡೆಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.

No Comments

Leave A Comment