Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಬೈಕ್ ಗಳ ಕಳ್ಳತನ ಪ್ರಕರಣ : ಅಂತರರಾಜ್ಯ ಕಳ್ಳರಿಬ್ಬರ ಬಂಧನ

ಬೈಂದೂರು : ಅಂತರರಾಜ್ಯ ಬೈಕ್ ಗಳ  ಇಬ್ಬರು ಕಳ್ಳರನ್ನು  ಉಡುಪಿ ಜಿಲ್ಲೆಯ  ಬೈಂದೂರು ತಾಲೂಕಿನ ಗಂಗೊಳ್ಳಿ ಠಾಣೆಯ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ನರಗುಂದ ಮೂಲದ  ಫಕ್ರುದ್ದೀನ್(22) ಮತ್ತು ಕಿರಣ ಶರಣಪ್ಪ ಕುಂಬಾರ (19) ಎಂದು ತಿಳಿಯಲಾಗಿದೆ.

ಬಂಧಿತ ಆರೋಪಿಗಳು ಅಂತರರಾಜ್ಯ ಕಳ್ಳರು ಎನ್ನಲಾಗಿದೆ.ಅವರು ರಾಜ್ಯದ ಕೆಲವು ಕಡೆಗಳಲ್ಲಿ ಬೈಕ್ ಹಾಗೂ ಇತರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಉಡುಪಿ ಜಿಲ್ಲಾ ಎಸ್ಪಿ ಎನ್ ವಿಷ್ಣುವರ್ಧನರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಉಡುಪಿ ಜಿಲ್ಲೆ ಹಾಗೂ ಶ್ರೀಕಾಂತ ಕೆ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

No Comments

Leave A Comment