Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಟಿ20 ವಿಶ್ವಕಪ್ ತಯಾರಿಗಾಗಿ ಐಪಿಎಲ್-2021 ಟೂರ್ನಿ ತೊರೆದ ಕ್ರಿಸ್ ಗೇಯ್ಲ್

ದುಬೈ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ತಯಾರಿಗಾಗಿ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಪಿಎಲ್ 2021 ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಹಾಲಿ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಸ್ ಗೇಯ್ಲ್ ಐಪಿಎಲ್ ಟೂರ್ನಿಯ ಬಯೋಬಬಲ್ ನಿಂದ  ಹೊರಬಿದ್ದು ಟಿ20 ಟೂರ್ನಿ ಬಯೋಬಬಲ್ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕ್ರಿಸ್ ಗೇಯ್ಲ್ ‘ಕಳೆದ ಕೆಲ ತಿಂಗಳಿನಿಂದ ನಾನು ಸಿಡಬ್ಲ್ಯುಐ ಬಬಲ್, ಸಿಪಿಎಲ್ ಬಬಲ್ ನಂತರ ಐಪಿಎಲ್ ಬಬಲ್‍ನ ಭಾಗವಾಗಿದ್ದೇನೆ. ಈಗ ನಾನು ಮಾನಸಿಕವಾಗಿ ಸಿದ್ಧವಾಗಲು ಮತ್ತು ರಿಫ್ರೆಶ್ ಆಗಲು ಬಯಸುತ್ತೇನೆ. ಹೀಗಾಗಿ ಬಯೋಬಬಲ್ ನಿಂದ ಹೊರಬಂದಿದ್ದೇನೆ ಎಂದು ಗೇಲ್ ಹೇಳಿದ್ದಾರೆ.

ಅಂತೆಯೇ ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ದುಬೈನಲ್ಲಿ ವಿರಾಮ ಪಡೆಯುತ್ತಿದ್ದೇನೆ. ನನಗೆ ಅನುಮತಿ ನೀಡಿದ ಪಂಜಾಬ್ ತಂಡಕ್ಕೆ ಧನ್ಯವಾದಗಳು. ಮುಂಬರುವ ಪಂದ್ಯಗಳಿಗೆ ಶುಭ ಹಾರೈಕೆಗಳು. ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತಂಡ ಟ್ವೀಟ್ ಮಾಡಿದೆ.

42 ವರ್ಷದ ಗೇಲ್ ಈ ವರ್ಷ ವೆಸ್ಟ್ ಇಂಡೀಸ್, ಸೈಂಟ್ ಕೀಟ್ಸ್, ನೆವಿಸ್ ಪ್ಯಾಟ್ರಿಯಾಟ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ಟೂರ್ನಿಗಳು ಬಯೋಬಬಲ್ ನಿಯಮಗಳ ಆಡಿಯಲ್ಲಿ ನಡೆದಿತ್ತು. ಹೀಗಾಗಿ ಆಟಗಾರರು ಕೋವಿಡ್ 19 ನಿಯಮವನ್ನು ಉಲ್ಲಂಘಿಸುವಂತಿಲ್ಲ.

ಟಿ–20 ಕ್ರಿಕೆಟ್‌ನಲ್ಲಿ ಸುಮಾರು 14,000 ರನ್ ಗಳಿಸಿರುವ ಗೇಲ್, ವೆಸ್ಟ್ ಇಂಡೀಸ್ ತಂಡವು 2012 ಮತ್ತು 2016ರ ಟಿ–20 ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

No Comments

Leave A Comment