Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ವಿಮಾನದ ಸೀಟಿನ ಅಡಿ 61 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ

ಬೆಂಗಳೂರು: ವಿಮಾನದ ಸೀಟಿನ ಕೆಳಗಡೆ ಅಪಾರ ಮೌಲ್ಯದ ಚಿನ್ನ ಪತ್ತೆಯಾದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರ‍ೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ದುಬೈನಿಂದ ಆಗಮಿಸಿದ ವಿಮಾನದಲ್ಲಿ 61 ಲಕ್ಷ ರೂಪಾಯಿ ಮೌಲ್ಯದ 29 ಚಿನ್ನದ ಕಡ್ಡಿಗಳು ಮತ್ತು ಚಿನ್ನದ ಪೇಸ್ಟ್ ಪತ್ತೆಯಾಗಿದ್ದು, ಅಕ್ರಮವಾಗಿ ಸಾಗಾಟ ಮಾಡಿದ ಆರೋಪಿಗಳ ಪತ್ತೆಗಾಗಿ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು ಕಸ್ಟಮ್ಸ್ ವಿಭಾಗದ ಏರ್ ಇಂಟಲಿಜನ್ಸ್ ಯುನಿಟ್ ಅಧಿಕಾರಿಗಳಿಗೆ ಚಿನ್ನದ ಅಕ್ರಮ ಸಾಗಾಟ ನಡೆದಿರುವ ಬಗ್ಗೆ ಅನುಮಾನ ಬಂದಿದ್ದು, ಈ ವೇಳೆ ಎಲ್ಲಾ ಪ್ರಯಾಣಿಕರು ವಿಮಾನದಿಂದ ನಿರ್ಗಮಿಸಿ ಆಗಿತ್ತು. ಎಕಾನಮಿ ಕ್ಲಾಸ್ ಸೀಟಿನ ಕೆಳಗಡೆಯಿದ್ದ ಪೊಟ್ಟಣದಲ್ಲಿ 61 ಲಕ್ಷ ಮೌಲ್ಯದ 29 ಚಿನ್ನದ ಕಡ್ಡಿಗಳು ಮತ್ತು ಚಿನ್ನದ ಪೇಸ್ಟ್ ಪತ್ತೆಯಾಗಿದೆ.

No Comments

Leave A Comment