Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ:ಶ್ರೀಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥರ ಚತುರ್ಥ ಪರ್ಯಾಯೋತ್ಸವ-2022-ಜನವರಿ-10ಕ್ಕೆಪುರಪ್ರವೇಶ- ಜ.11ರಿಂದ 16 ರವರೆಗೆ ಹೊರೆಕಾಣಿಕೆ

ಉಡುಪಿ: ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರ ಚತುರ್ಥ ಪರ್ಯಾಯ ಮಹೋತ್ಸವದ ಪ್ರಥಮ ಸಭೆಯು ಸೋಮವಾರ 27.9.2021 ರಂದು ಸಮಿತಿಯ ಅಧ್ಯಕ್ಢರಾದ ಕೆ ಸೂರ್ಯ ನಾರಾಯಣ ಉಪಾಧ್ಯ ನೇತೃತ್ವದಲ್ಲಿ ಹೊರೆ ಕಾಣಿಕೆ ಪ್ರಥಮ ಸಭೆಯು ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಕೃಷ್ಣ ಸಭಾ೦ಗಣದಲ್ಲಿ ನೆರವೇರಿತು.

ಜನವರಿ 17,18 -2022 ರಂದು ನಡೆಯಲಿರುವ ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರ ಚತುರ್ಥ ಪರ್ಯಾಯ ಮಹೋತ್ಸವ, ಇದರ ಹೊರೆಕಾಣಿಕೆ ಮೆರವಣಿಗೆಯು ಜನವರಿ ತಾ 11.1.2022 ರಿಂದ 16.1.2022 ರವರೆಗೆ ನಡೆಯಲಿದ್ದು ಅದಕ್ಕೆ ಬೇಕಾದ ಪೂರ್ವ ಬಾವಿ ವ್ಯವಸ್ಥೆ ಬಗ್ಗೆ ಮಾತನಾಡಿದ ಸಂಚಾಲಕರು ವಿಜೃಂಭಣೆಯಿಂದ ಮಾಡುವ ಕುರಿತು ನಗರಸಭೆ ವ್ಯಾಪ್ತಿ, ಗ್ರಾಮ ಪಂಚಾಯತ್, ಧರ್ಮಸ್ಥಳ ಗ್ರಾಮಭಿವೃದ್ಧಿ ಸ್ವಸಹಾಯ ಸಂಘ, ಸ್ಥಳೀಯ ದೇವಸ್ಥಾನಗಳನ್ನು ಸಂಗ್ರಹ ಕೇಂದ್ರವಾಗಿಟ್ಟುಕೊಂಡು ಎಲ್ಲರನ್ನು ಕೂಡಿಕೊಂಡು ಉತ್ತಮ ರೀತಿಯಲ್ಲಿ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ಪ್ರಥಮ ಸಭೆಯಲ್ಲಿ ಹೇರಂಜೆ ಕೃಷ್ಣ ಭಟ್, ಶ್ರೀಶ ಆಚಾರ್, ರಾಮಚಂದ್ರ ಉಪಾಧ್ಯ, ರಾಘವೇಂದ್ರ ರಾವ್ ಹಾಗೂ ಸಮಿತಿಯ ಪ್ರಮುಖ ಪದಾಧಿಕಾರಿಗಳಲ್ಲದೆ, ಲಕ್ಷ್ಮೀನಾರಾಯಣ ರಾವ್ ಕೃಷ್ಣಾಪುರ, ವೆಂಕಟರಮಣ ಮುಚ್ಚಿ೦ತ್ತಾಯ, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್(ರಿ )ಪದಾಧಿಕಾರಿಗಳು, ದೈವಜ್ಞ ಯುವಕ ಮಂಡಲ, ಧರ್ಮಸ್ಥಳ ಸ್ವಸಹಾಯ ಸಂಸ್ಥೆಯ ರೋಹಿತ್ ಹಾಗೂ ಪ್ರಮುಖರು, ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್, ಗಾಣಿಗ ಸಮಾಜದ ನಗರ ಅಧ್ಯಕ್ಷ ಜಯರಾಮ್, ಭಂಡಾರಿ ಸಮಾಜದ ಬ್ರಹ್ಮಾವರ ಅಧ್ಯಕ್ಷ ಅರುಣ್ ಭಂಡಾರಿ, ಹಿಂದೂ ಜಾಗರಣ ವೇಧಿಕೆಯ ಮಹೇಶ್ ಬೈಲೂರ್, ಪ್ರಕಾಶ್ ಅಂದ್ರಾದೆ, ರಂಜಿತ್ ಶೆಟ್ಟಿ,ಹರೀಶ್ ಪೂಜಾರಿ ಅಲ್ಲದೆ ಇತರ ಪ್ರಮುಖರು ಉಪಸ್ಥಿತರಿದ್ದರು.

ಪರ್ಯಾಯೋತ್ಸವ ಸಮಿತಿಯ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಅಧಿಕಾರಿ ಬಿ ವಿ ಲಕ್ಷ್ಮಿನಾರಾಯಣ ಧನ್ಯವಾದ ನೀಡಿದರು.

No Comments

Leave A Comment