Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಕುಲಕಸುಬಿನ ಪುನರುತ್ಥಾನ: ಚಾಪೆ ಹೆಣೆಯುವ ಕಾರ್ಯಾಗಾರದ ಸಮಾರೋಪ

ಉಡುಪಿ:ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಗೊಡ್ಡ ಮೊಗೇರ ಸಮಾಜದ ಕುಲಕಸುಬಿನ ಪುನರುತ್ಥಾನ ಅಂಗವಾಗಿ ಚಾಪೆ ಹೆಣೆಯುವ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸಮಾಜ ಕಲ್ಯಾಣ,ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಿ, ಹಿಂದಿನಿಂದಲೂ ಪ್ರತಿಯೊಬ್ಬರಿಗೂ ಕುಲಕಸುಬುಗಳಿವೆ.ಇದನ್ನು ಮುಂದಿನ ಜನಾಂಗಕ್ಕೆ ಮುಂದುವರಿಸಿಕೊಂಡು ಹೋಗಬೇಕು.

ಇಂತಹ ಕರಕುಶಲ ವಸ್ತುಗಳಿಗೆ ಆಧುನಿಕ ಸ್ಪರ್ಶ ನೀಡಿ ವೃತ್ತಿಪರರ ಬದುಕಿಗೆ ಬೇಕಾದ ಸಹಕಾರ ನೀಡಬೇಕು.ಸರ್ಕಾರದ ವತಿಯಿಂದ ಅದಕ್ಕೆ ಬೇಕಾದ ಮಾರುಕಟ್ಟೆಯನ್ನು ಮಾಡಿ ಸಬ್ಸಿಡಿಯ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು.

ಅಭ್ಯಾಗತರಾಗಿ ಆಗಮಿಸಿದ ಉಡುಪಿ ಶಾಸಕರಾದ ಕೆ.ರಘುಪತಿ ಭಟ್, ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ನಬಾರ್ಡಿನ ಮಂಗಳೂರಿನ ಪ್ರಧಾನ ವ್ಯವಸ್ಥಾಪಕರಾದ ಅರುಣ್ ತಲ್ಲೂರ್ ಇವರು ಈ ಕರಕುಶಲ ಕಲೆಗೆ ಹಾಗೂ ಕುಶಲಕರ್ಮಿಗಳಿಗೆ ತಮ್ಮಿಂದಾಗುವ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಮಾಜ ಬದಲಾಗುತ್ತಿದೆ,ಈಗಿನ ಪೀಳಿಗೆಯವರು ಪ್ರಾಚೀನ ವಸ್ತುಗಳನ್ನೇ ಉಪಯೋಗ ಮಾಡಲು ಆರಂಭಿಸಿದ್ದಾರೆ.ಈ ಕುಲಕಸುಬಿನವರು ಒಗ್ಗಟ್ಟಾಗಿ ಪ್ರಯತ್ನ ಮಾಡಿದರೆ ಸರ್ಕಾರ ಹಾಗೂ ಸಮಾಜದಿಂದ ಉತ್ತಮ ರೀತಿಯ ಸಹಕಾರ ಸಿಗುತ್ತದೆ. ನಮ್ಮ ಊರಿನ ಕಲೆ ಉಳಿಸುವ ಜವಾಬ್ಧಾರಿ ನಮಗಿದೆ.ಇದನ್ನು ಉಳಿಸಿದರೆ ನಮ್ಮ ದೇಶದ ಮೌಲ್ಯ ವರ್ಧನೆ ಆಗಿ ಭಾರತವು ವಿಶ್ವಗುರುವಾಗುತ್ತದೆ.ಕೃಷ್ಣ ದೇವರ ಮುಂಭಾಗದಲ್ಲಿ ದೇವರಿಗೆ ಸಮರ್ಪಿಸಿರುವುದರಿಂದ ಭವಿಷ್ಯತ್ತಿನಲ್ಲಿ ಶ್ರೇಯಸ್ಸಾಗಲಿ ಎಂದು ಸಂದೇಶ ನೀಡಿದರು.

ವೇದಿಕೆಯಲ್ಲಿ ಪ್ರಮುಖ ಸಲಹೆಗಾರರಾದ ಪುರುಷೋತ್ತಮ ಆಡ್ವೇ ,ಜಗನ್ನಾಥ ಬಂಗೇರ ಉಪಸ್ಥಿತರಿದ್ದು ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿ,ರಾಜಶೇಖರ ಜಿ.ಎಸ್ ಮಟ್ಟು ಪ್ರಸ್ತಾವನೆ ಮಾಡಿ,ಪರ್ಯಾಯ ಮಠದ ವಿದ್ವಾಂಸರಾದ ಕಾರ್ಯಕ್ರಮವನ್ನು ನಿರೂಪಿಸಿ,ಶ್ರೀ ಕೃಷ್ಣ ಬಳಗದ ವೈ.ಎನ್.ರಾಮಚಂದ್ರ ರಾವ್ ಧನ್ಯವಾದ ನೀಡಿದರು.

No Comments

Leave A Comment