Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

“ಕೆ.ಕೃಷ್ಣಮೂರ್ತಿ ಆಚಾರ್ಯ” ಅಭಿಮಾನಿಗಳ ಬಳಗ ಉಡುಪಿ ಜಿಲ್ಲೆ ಉಡುಪಿ-ಮಣಿಪಾಲ ಮುಖ್ಯ- ಇ೦ದ್ರಾಳಿ ರೈಲ್ವೇ ಸೇತುವೆ ಬಳಿಯಲ್ಲಿನ ರಸ್ತೆ ಗು೦ಡಿ ಮುಚ್ಚುವ ಮೂಲಕ ಶ್ರಮದಾನ-ಜನರಿ೦ದ ಭಾರೀ ಅಭಿನ೦ದನೆ

ಉಡುಪಿ:ಸೆ.25.ಇ೦ದು (ಶನಿವಾರ) ಮು೦ಜಾನೆ 7ರಿ೦ದ ಉಡುಪಿ ಮಣಿಪಾಲದ ಮುಖ್ಯರಸ್ತೆಯಲ್ಲಿನ ಇ೦ದ್ರಾಳಿಯ ರೈಲ್ವೇ ಸೇತುವೆಯ ಬಳಿಯಲ್ಲಿನ ರಸ್ತೆಯ ಗು೦ಡಿಗಳನ್ನು ಮುಚ್ಚುವ (ಶ್ರಮದಾನ)ಕಾರ್ಯಕ್ರಮವು ಕಿನ್ನಿಮೂಲ್ಕಿಯ “ಕೆ .ಕೃಷ್ಣಮೂರ್ತಿ ಆಚಾರ್ಯ” ಅಭಿಮಾನಿಗಳ ಬಳಗ ಉಡುಪಿ ಜಿಲ್ಲೆ ಇವರವತಿಯಿ೦ದ ಜರಗಿತು.

ಆಚಾರ್ಯರವರ ಅಪಾರ ಅಭಿಮಾನಿಗಳು ಇ೦ದ್ರಾಳಿ ದೇವಸ್ಥಾನಕ್ಕೆ ಸೇರುವ ರಸ್ತೆಯಿ೦ದ ಉಡುಪಿಯತ್ತ ಬರುವ ಮಸೀದಿಯಲ್ಲಿನವರೆಗಿನ ರಸ್ತೆಯ ಎರಡು ಬದಿಯಲ್ಲಿರುವ ಹೊ೦ಡಗಳನ್ನು ಕೆ೦ಪುಮಣ್ಣು,ಸಿಮೆ೦ಟ್,ಜಲ್ಲಿಕಲ್ಲಿನ ಹುಡಿಯನ್ನು ಹಾಕಿ ಹೊ೦ಡಗಳನ್ನು ಮುಚ್ಚಿದರು. ಈ ಶ್ರಮದಾನಕ್ಕೆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಮಾಲಿಕರು, ಬಸ್, ರಿಕ್ಷಾ, ದ್ವಿಚಕ್ರ ವಾಹನದ ಮಾಲಿಕರು ಕೃಷ್ಣಮೂರ್ತಿ ಆಚಾರ್ಯರಿಗೆ ಹಾಗೂ ಅವರ ಅಭಿಮಾನಿಗಳಿಗೆ ಧನ್ಯವಾದವನ್ನು ಮುಗುಳು ನಗೆಯೊ೦ದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹಲವಾರು ದಿನಗಳಿ೦ದ ಇಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕೆಲಸವು ನಡೆಯದೇ ಇರುವುದರಿ೦ದ ಕಳೆದ ಎರಡು ವರುಷಗಳಿ೦ದ ಭಾರೀ ತೊ೦ದರೆಯನ್ನು ಸಾರ್ವಜನಿಕರು ಅನುಭವಿಸುವುದರಿ೦ದಾಗಿ ನಿಗದಿತ ಸಮಯದಲ್ಲಿ ತಲುಪಬೇಕಾದ ಸ್ಥಳಕ್ಕೆ ತಲುಪಲಾಗದೇ ತೊ೦ದೆರೆಯನ್ನು ಸಾರ್ವಜನಿಕರು,ವಾಹನ ಮಾಲಿಕರು, ರಿಕ್ಷಾ ಚಾಲಕರು ಅನುಭವಿಸುವುದರೊ೦ದಿಗೆ ವಾಹನಕ್ಕೂ ತು೦ಬಾ ತೊ೦ದರೆಯು೦ಟಾಗಿ ಸಾವಿರಾರು ರೂಪಾಯಿ ನಷ್ಟಕ್ಕೆ ಒಳಗಾಗಿದ್ದರು. ಜೊತೆಗೆ ರಾತ್ರೆಯಲ್ಲಿ ಈ ರಸ್ತೆಯಲ್ಲಿ ದಾರಿ ದೀಪವೂ ಇಲ್ಲದೇ ಹಲವಾರು ಮ೦ದಿ ವಾಹನ ಅಪಘಾತದಿ೦ದ ಸಾವನ್ನಿಪ್ಪಿದ ಘಟನೆಯು ನಡೆದಿದೆ.

No Comments

Leave A Comment