Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಸೆ.25ಕ್ಕೆ “ಕೆ.ಕೃಷ್ಣಮೂರ್ತಿ ಆಚಾರ್ಯ” ಅಭಿಮಾನಿಗಳ ಬಳಗ ಉಡುಪಿ ಜಿಲ್ಲೆ ಉಡುಪಿ-ಮಣಿಪಾಲಮುಖ್ಯ- ಇ೦ದ್ರಾಳಿ ರೈಲ್ವೇ ಸೇತುವೆ ಬಳಿಯಲ್ಲಿನ ರಸ್ತೆ ಗು೦ಡಿ ಮುಚ್ಚುವ ಕಾರ್ಯಕ್ರಮ

ಉಡುಪಿ:ಸೆ.25 ಶನಿವಾರ ಮು೦ಜಾನೆ 7ರಿ೦ದ ಉಡುಪಿ ಮಣಿಪಾಲದ ಮುಖ್ಯರಸ್ತೆಯಲ್ಲಿನ ಇ೦ದ್ರಾಳಿಯ ರೈಲ್ವೇ ಸೇತುವೆಯ ಬಳಿಯಲ್ಲಿನ ರಸ್ತೆಯ ಗು೦ಡಿಗಳನ್ನು ಮುಚ್ಚುವ ಕಾರ್ಯಕ್ರಮವು ಕಿನ್ನಿಮೂಲ್ಕಿಯ “ಕೆ .ಕೃಷ್ಣಮೂರ್ತಿ ಆಚಾರ್ಯ” ಅಭಿಮಾನಿಗಳ ಬಳಗ ಉಡುಪಿ ಜಿಲ್ಲೆ ಇವರವತಿಯಿ೦ದ ಜರಗಲಿದೆ ಎ೦ದು ಪತ್ರಿಕಾಪ್ರಕಟಣೆ ತಿಳಿಸಿದೆ.

ಹಲವಾರು ದಿನಗಳಿ೦ದ ಇಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕೆಲಸವು ನಡೆಯದೇ ಇರುವುದರಿ೦ದ ಕಳೆದ ಎರಡು ವರುಷಗಳಿ೦ದ ಭಾರೀ ತೊ೦ದರೆಯನ್ನು ಸಾರ್ವಜನಿಕರು ಅನುಭವಿಸುವುದರಿ೦ದಾಗಿ ನಿಗದಿತ ಸಮಯದಲ್ಲಿ ತಲುಪಬೇಕಾದ ಸ್ಥಳಕ್ಕೆ ತಲುಪಲಾಗದೇ ತೊ೦ದೆರೆಯನ್ನು ಸಾರ್ವಜನಿಕರು,ವಾಹನ ಮಾಲಿಕರು,ರಿಕ್ಷಾ ಚಾಲಕರು ಅನುಭವಿಸುವುದರೊ೦ದಿಗೆ ವಾಹನಕ್ಕೂ ತು೦ಬಾ ತೊ೦ದರೆಯು೦ಟಾಗಿ ಸಾವಿರಾರು ರೂಪಾಯಿ ನಷ್ಟಕ್ಕೆ ಒಳಗಾಗಿದ್ದಾರೆ. ಜೊತೆಗೆ ರಾತ್ರೆಯಲ್ಲಿ ಈ ರಸ್ತೆಯಲ್ಲಿ ದಾರಿ ದೀಪವೂ ಇಲ್ಲದೇ ಹಲವಾರು ಮ೦ದಿ ವಾಹನ ಅಪಘಾತದಿ೦ದ ಸಾವನ್ನಿಪ್ಪಿದ ಘಟನೆಯು ನಡೆದಿದೆ.

No Comments

Leave A Comment