Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕು. ಪವಿತ್ರಾ ಕುರ್ತಕೋಟಿಗೆ ಮುಖ್ಯಮಂತ್ರಿಗಳಿಂದ ಸೈಕಲ್ ಪ್ರದಾನ

ಬೆಂಗಳೂರು: ಗದಗ ಜಿಲ್ಲೆಯ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕುಮಾರಿ ಪವಿತ್ರಾ ಕುರ್ತಕೋಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಸೈಕಲ್ ಪ್ರದಾನ ಮಾಡಿದರು.

 ನಂತರ ಮಾತನಾಡಿದ ಅವರು, ರಾಷ್ಟ್ರಮಟ್ಟದ ಸ್ಲೈಕ್ಲಿಂಗ್ ಕ್ರೀಡಾಪಟುವಾಗಿರುವ ಪವಿತ್ರಾ ಅವರಿಗೆ ಸೈಕಲ್ ಅಗತ್ಯವಿರುವ ಬಗ್ಗೆ ಖಾಸಗಿ ವಾಹಿನಿಯೊಂದರ ಸಂದರ್ಶನ ಸಂದರ್ಭದಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಇಲಾಖೆಗೆ ವಿಷಯ ಮುಟ್ಟಿಸಲಾಗಿತ್ತು. ಕೇವಲ 8 ದಿನಗಳಲ್ಲಿ ಕೆನಡಾದಿಂದ ಸೈಕಲ್ ತರಿಸಿಕೊಡುವ ಕೆಲಸವನ್ನು ಯೋಜನಾ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಅಪರ  ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾಡಿದ್ದಾರೆ. ಸರ್ಕಾರದ ಅನುದಾನ ಪಡೆಯದೆ ದೇಣಿಗೆ ಪಡೆದು ಈ ಕಾರ್ಯವನ್ನು ಮಾಡಿರುವುದಾಗಿ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪವಿತ್ರಾ ಕುರ್ತಕೋಟಿ ಪಟಿಯಾಲದಲ್ಲಿ ಏರ್ಪಡಿಸಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು. ಅಂತಾರಾಷ್ಟ್ರೀಯ ಮಟ್ಟದ ಸ್ಲೈಕ್ಲಿಂಗ್ ಟ್ರಾಕ್ ನ್ನು ವಿಜಯಪುರದ ಮೇಲೊಡ್ರೋಮ್ ನಲ್ಲಿ ಶೀಘ್ರದಲ್ಲಿಯೇ ಕಾರ್ಯರಂಭ ಮಾಡಲಿದೆ ಎಂದು ತಿಳಿಸಿದರು.

ಈ ಸೈಕಲ್ ನ್ನು ಕೆನಡಾ ದೇಶದಿಂದ ತರಿಸಲಾಗಿದ್ದು, ಇದರ ವೆಚ್ಚ 5 ಲಕ್ಷ ರೂಪಾಯಿ ಆಗಿದೆ. ಎಂಬೆಸ್ಸಿ, ಬ್ಲಾಸಂ ಆಸ್ಪತ್ರೆ ಹಾಗೂ ಮಧುಸೂಧನ ಎಂಬುವರು ಸಿಎಸ್ ಆರ್ ನಿಧಿಯಿಂದ ವೆಚ್ಚವನ್ನು ಭರಿಸಿದ್ದಾರೆ.

No Comments

Leave A Comment