ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿ.ಇ.ಟಿ. 2021ರ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
ಇಂಜಿನಿಯರಿಂಗ್ನಲ್ಲಿ ಅಭಿಷೇಕ್ 494, ಪ್ರಣಮ್ ಪಿ. ಶೆಟ್ಟಿ 517, ಭಾರ್ಗವಿ ಬೋರ್ಕರ್ 623, ಧವನ್ ವಿ.ಎಂ. 732, ಮತ್ತು ಕೆ. ಆರ್. ಪಾರ್ಥಸಾರಥಿ ಹೆಬ್ಬಾರ್ 828 ನೇ ರ್ಯಾಂಕ್ ಗಳಿಸಿದ್ದಾರೆ.
ಅಗ್ರಿಕಲ್ಚರಲ್ ಬಿ.ಎಸ್ಸಿ.ಯಲ್ಲಿ ಭಾರ್ಗವಿ ಬೋರ್ಕರ್ 115, ಧವನ್ ವಿ.ಎಂ. 379, ವೈಷ್ಣವಿ 544, ಕೆ. ಆರ್. ಪಾರ್ಥಸಾರಥಿ ಹೆಬ್ಬಾರ್ 545, ಸಾಕ್ಷಿ 547ನೇ ರ್ಯಾಂಕ್ ಗಳಿಸಿದ್ದು ಮತ್ತು ಬಿ.ಫಾರ್ಮಾ ವಿಭಾಗದಲ್ಲಿ ಭಾರ್ಗವಿ ಬೋರ್ಕರ್ 327, ಸಾಕ್ಷಿ 992ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.