Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಪಿತೃ ಪಕ್ಷದ ವೇಳೆ ಪೂರ್ವಜರಿಗೆ ಗೌರವ ಸಲ್ಲಿಸುವುದೇ ಮಹಾಲಯ-ಇ೦ದಿನಿ೦ದ 15 ದಿನಗಳ ಕಾಲ ಮಹಾಲಯ

ಭಾದ್ರಪದ ತಿಂಗಳ ಹುಣ್ಣಿಮೆ ಅಂದರೆ ಪಿತೃ ಪಕ್ಷ ಆರಂಭ. ಹಿಂದೂ ಸಂಪ್ರದಾಯದಲ್ಲಿ ಪಿತೃ ಪಕ್ಷವನ್ನು ಬಹಳ ಮುಖ್ಯವೆಂದು ಹೇಳಲಾಗುತ್ತೆ. ಪ್ರತಿ ವರ್ಷ 15 ದಿನಗಳ ಕಾಲ ಪೂರ್ವಜರಿಗೆ ಗೌರವ ಸಲ್ಲಿಸಲಾಗುತ್ತೆ. ಈ 15 ದಿನಗಳ ಅವಧಿಯನ್ನು ಪಿತೃ ಪಕ್ಷ ಅಥವಾ ಚಾತುರ್ಮಾಸದ ಶ್ರಾದ್ಧ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಸತ್ತ ನಂತರ ಅವನ ಆತ್ಮವು ಅಲೆದಾಡುತ್ತಲಿರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಅವರ ಆತ್ಮಗಳ ಶಾಂತಿಗಾಗಿ ಪಿಂಡ ದಾನ, ತರ್ಪಣ, ಶ್ರಾದ್ಧವನ್ನು ಮಾಡುತ್ತಾರೆ. ಈ ರೀತಿ ಪೂರ್ವಜನ ಆರ್ಶೀವಾದ ಪಡೆಯಬಹುದು ಎನ್ನುತ್ತಾರೆ.

ಪಿತೃ ಪಕ್ಷದ ಸಮಯದಲ್ಲಿ 15 ದಿನಗಳ ಕಾಲ ಪೂರ್ವಜರು ತಮ್ಮ ಕುಟುಂಬದೊಂದಿಗೆ ಇರಲು ಭೂಮಿಗೆ ಬರುತ್ತಾರೆ ಎಂಬ ನಂಬಿಕೆಗಳಿವೆ. ಹೀಗಾಗಿ ಈ ಸಮಯಲ್ಲಿ ಪೂರ್ವಜರನ್ನು ಸಂತೋಷಪಡಿಸುವಂತಹ ಕೆಲಸ ಮಾಡಬೇಕು.

ಪಿತೃ ಪಕ್ಷ ಯಾವಾಗ
ಈ ವರ್ಷ, ಪಿತೃ ಪಕ್ಷವು ಸೆಪ್ಟೆಂಬರ್ 21 ರಂದು ಆರಂಭವಾಗಿ ಅಕ್ಟೋಬರ್ 6 ರಂದು ಕೊನೆಗೊಳ್ಳುತ್ತದೆ. ಪಿತೃ ಪಕ್ಷದ ಕೊನೆಯ ದಿನವೆಂದರೆ ಸರ್ವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ. ಈ ಅವಧಿಯಲ್ಲಿ ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ.

ಶ್ರಾದ್ಧದ ಅರ್ಥ
ಈ ಪದವನ್ನು ಎರಡು ಸಂಸ್ಕೃತ ಪದಗಳಿಂದ ತೆಗೆದುಕೊಳ್ಳಲಾಗಿದೆ. “ಸತ್” (ಸತ್ಯ) ಮತ್ತು “ಆಧಾರ್” (ಆಧಾರ). ಆದ್ದರಿಂದ, ಶ್ರಾದ್ಧವು ಅತ್ಯಂತ “ಶ್ರಾದ್ಧ” ಮತ್ತು ಭಕ್ತಿಯಿಂದ ಮಾಡಿದ ಕಾಣಿಕೆಯನ್ನು ಸೂಚಿಸುತ್ತದೆ.

ಪಿತೃ ಪಕ್ಷ ಮಹತ್ವ
ಪಿತೃ ಪಕ್ಷವು ಚಂದ್ರನ ಚಕ್ರದ ಕ್ಷೀಣಿಸುವಿಕೆಯ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ, ಸತ್ತವರಿಗೆ ಗೌರವ ಸಲ್ಲಿಸಲು ವಿವಿಧ ಆಚರಣೆಗಳನ್ನು ಮಾಡಲಾಗುತ್ತೆ. ಮೊದಲೇ ಹೇಳಿದಂತೆ, ಸಾವಿನಲ್ಲಿ ಶಾಂತಿ ಕಂಡುಕೊಳ್ಳದವರ ಆತ್ಮವು ತಮ್ಮ ಕುಟುಂಬದ ಸದಸ್ಯರನ್ನು ಪರೀಕ್ಷಿಸಲು ಭೂಮಿಯ ಸುತ್ತ ಅಲೆದಾಡುತ್ತದೆ ಎಂದು ನಂಬಲಾಗಿದೆ. ಅವರು ಮೋಕ್ಷವನ್ನು ಪಡೆಯಲು ಮತ್ತು ಅವರಿಗೆ ಶಾಂತಿ ನೆಮ್ಮದಿ ನೀಡಲು ಜನರು ಪಿಂಡದಾನವನ್ನು ಮಾಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಪಿತೃ ದೋಷದಿಂದ ಬಳಲುತ್ತಿರುವ ಜನರು (ಪಿತೃಗಳ ಶಾಪ) ಶ್ರಾದ್ಧ ಆಚರಣೆಗಳನ್ನು ಮಾಡಬೇಕು. ಮತ್ತು ಕಾಗೆಗೆ ಆಹಾರವನ್ನು ನೀಡಬೇಕು.

No Comments

Leave A Comment