Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು ‘ಆದಷ್ಟು ಬೇಗ’ ಶಾಲೆಗೆ ಮರಳಲು ಅವಕಾಶ: ತಾಲಿಬಾನ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಆದಷ್ಟು ಬೇಗ ಶಾಲೆಗೆ ಮರಳಲು ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಮಂಗಳವಾರ ತನ್ನ ಎಲ್ಲ ಪುರುಷ ಸಂಪುಟದಲ್ಲಿ ಉಳಿದ ಸ್ಥಾನಗಳನ್ನು ಘೋಷಿಸಿದ ನಂತರ ಹೇಳಿದೆ.

“ನಾವು ಈ ವಿಚಾರವನ್ನು ಅಂತಿಮಗೊಳಿಸುತ್ತಿದ್ದೇವೆ… ಅದು ಆದಷ್ಟು ಬೇಗ ಹೆಣ್ಣು ಮಕ್ಕಳು ಶಾಲೆಗೆ ಮರಳಲು ಅವಕಾಶ ನೀಡಲಾಗುವುದು” ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಬಾಲಕಿಯರ ಶಿಕ್ಷಣದ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ ಮಹಿಳಾ ವ್ಯವಹಾರಗಳ ಸಚಿವಾಲಯ ಬಂದ್ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಜಾಹಿದ್ ನಿರಾಕರಿಸಿದ್ದಾರೆ.

ಶಿಕ್ಷಣ ಸಚಿವಾಲಯವು ಕಳೆದ ವಾರಾಂತ್ಯದಲ್ಲಿ ಮಾಧ್ಯಮಿಕ ಶಾಲೆಯ ಪುರುಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಾಲೆಗೆ ಮರಳುವಂತೆ ಆದೇಶಿಸಿತ್ತು. ಆದರೆ ದೇಶದ ಮಹಿಳಾ ಶಿಕ್ಷಕರು ಮತ್ತು ಬಾಲಕಿಯರ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ.

ಇನ್ನು ತಾಲಿಬಾನ್ ಸರ್ಕಾರ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ಸ್ಥಗಿತಗೊಳಿಸಿದ್ದು, ಅದನ್ನು ತಮ್ಮ ಮೊದಲ ಆಳ್ವಿಕೆಯಲ್ಲಿ ಜಾರಿಯಲ್ಲಿದ್ದ ಕಟ್ಟುನಿಟ್ಟಾದ ಧಾರ್ಮಿಕ ಸಿದ್ಧಾಂತವನ್ನು ಜಾರಿಗೊಳಿಸುವ ಇಲಾಖೆಯನ್ನಾಗಿ ಬದಲಾಯಿಸಲಾಗಿದೆ.

No Comments

Leave A Comment