Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಮಂಗಳೂರು: ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಮೂವರು ಮಹಿಳೆಯರ ಮೇಲೆ ದುಷ್ಕರ್ಮಿಯಿಂದ ಮಚ್ಚಿನಿಂದ ದಾಳಿ – ಒಬ್ಬರು ಗಂಭೀರ

ಮಂಗಳೂರು, ಸೆ 20: ಮೂವರು ಮಹಿಳೆಯರ ಮೇಲೆ ಅಪರಿಚಿತ ದುಷ್ಕರ್ಮಿ ತಲ್ವಾರ್ ದಾಳಿ ನಡೆಸಿದ ಘಟನೆ ನಗರದ ಕರಂಗಲಪಾಡಿ ಬಳಿ ಸೆ.20ರಂದು ನಡೆದಿದೆ.

ನಗರದ ಕರಂಗಲಪಾಡಿ ಬಳಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಈ ಘಟನೆ ನಡೆದಿದೆ. ನಿರ್ಮಲಾ, ರಿನಾ ರಾಯ್, ಗುಣವತಿ ಮೇಲೆ ತಲ್ವಾರ್ ದಾಳಿ ನಡೆದಿದೆ. ಈ ಪೈಕಿ ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದೆ. ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಉಪನ್ಯಾಸಕಿ ಒಬ್ಬರಿಗೆ ಗಿಫ್ಟ್ ಕೊಡಲಿದೆ ಎಂದು ಹೇಳಿ ಮಾತು ಆರಂಭಿಸಿ ಅಪರಿಚಿತ ದುಷ್ಕರ್ಮಿ ಏಕಾಏಕಿ ಚೀಲದಲ್ಲಿದ್ದ ಮಚ್ಚು ತೆಗೆದು ಏಕಾಏಕಿ ಸಿಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿದ್ದಾರೆ.

ಸ್ಥಳಕ್ಕೆ ಬರ್ಕೆ ಪೊಲೀಸರು ದೌಡಾಯಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

No Comments

Leave A Comment