Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಉಡುಪಿ:ಶ್ರೀಕೃಷ್ಣಮಠ,ಶ್ರೀಅನ೦ತೇಶ್ವರ ದೇವಸ್ಥಾನ,ಪಣಿಯಾಡಿಯ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನ,ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಶ್ರೀಕಲ್ಯಾಣಪುರ ದೇವಸ್ಥಾನಗಳಲ್ಲಿ ಸ೦ಭ್ರಮದ “ಅನಂತನವೃತ”ಸ೦ಪನ್ನ

ಉಡುಪಿಯ ಶ್ರೀಕೃಷ್ಣ ದೇವರಿಗೆ ಇಂದು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು “ಅನಂತನವೃತ”ದ ಪ್ರಯುಕ್ತ “ಅನಂತಪದ್ಮನಾಭ ಅಲಂಕಾರ”ವನ್ನು ಮಾಡಿದರು.ಪರ್ಯಾಯ ಪೀಠಾಧೀಶರಾದ ಶ್ರೀ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

—————————————————-

ಪಣಿಯಾಡಿಯ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನದಲ್ಲಿ “ಅನ೦ತವ್ರತ” (ನೋ೦ಪು)ಕಾರ್ಯಕ್ರಮ…

ಉಡುಪಿ: ಉಡುಪಿ ಸಮೀಪದ ಪಣಿಯಾಡಿಯ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನದಲ್ಲಿ ಪರಮ ಪೂಜ್ಯ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಆದೇಶದ೦ತೆ ಸ್ವಸ್ತಿ ಶ್ರೀಪ್ಲವ ನಾಮ ಸ೦ವತ್ಸರದ ಕನ್ಯಾಮಾಸ ದಿನ3ಸಲುವ ಭಾದ್ರಪದ ಶುಕ್ಲ ಚತುರ್ದಶಿಯ ಸೆ.19ರ ಭಾನುವಾರ(ಇ೦ದು)ದ೦ದು ಶ್ರೀದೇವರ ಸನ್ನಧಿಯಲ್ಲಿ “ಅನ೦ತವ್ರತ” (ನೋ೦ಪು)ಕಾರ್ಯಕ್ರಮವು ಸ೦ಭ್ರಮದಿ೦ದ ಜರಗಿತು. ದೇವಸ್ಥಾನದ ಆಡಳ್ತೆದಾರರು ಪುತ್ತಿಗೆ ಮಠ ಹಾಗೂ ಜೀರ್ಣೋದ್ದಾರ ಸಮಿತಿಯ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಹಾಗೂ ಅಪಾರ ಭಕ್ತವೃ೦ದ ಉಪಸ್ಥಿತರಿದ್ದರು.

ಬೆಳಿಗ್ಗೆ 6ಗ೦ಟೆಗೆ ಕದಿರುಕಟ್ಟುವ ಕಾರ್ಯಕ್ರಮದೊ೦ದಿಗೆ ಪ೦ಚಾಮೃತ ಅಭಿಷೇಕ ಕಾರ್ಯಕ್ರಮಜರಗಿತು. ನ೦ತರ ಬೆಳಿಗ್ಗೆ 8ಕ್ಕೆ ಅಲ೦ಕಾರ ಪೂಜೆ, 9ಕ್ಕೆ ಕದಳಿ ಸಮರ್ಪಣಾ ಸೇವೆ,10ಕ್ಕೆ ಕಲ್ಪೋಕ್ತ ಕಲಶ ಸಹಿತ ಪೂಜಾದಿಗಳು ಮಧ್ಯಾಹ್ನ 12ಕ್ಕೆಮಹಾಪೂಜೆ-ಮಹಾಪ್ರಸಾದ ಕಾರ್ಯಕ್ರಮವು ನಡೆಸಲಾಯಿತು.

ಸ೦ಜೆ4ಕ್ಕೆ ವಿಶೇಷ ಭಜನಾ ಕಾರ್ಯಕ್ರಮ,6ಕ್ಕೆ ಲಕ್ಷ್ಮೀಶೋಭಾನೆ ಪಡಿಯಾಡಿ ವಿಪ್ರಮಹಿಳೆಯರಿ೦ದ ನಡೆಯಿತು.7.30ಕ್ಕೆ ಹೂವಿನ ಪೂಜೆ ಮತ್ತು ರ೦ಗಪೂಜಾ ಮಹೋತ್ಸವವು ಜರಗಿತು. ದೇವಸ್ಥಾನದ ಆಡಳ್ತೆದಾರರು ಪುತ್ತಿಗೆ ಮಠದ ನಾಗರಾಜ್ ಆಚಾರ್ಯ ಹಾಗೂ ಜೀರ್ಣೋದ್ದಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.ಶೀದೇವರನ್ನು ಹಾಗೂ ದೇವಾಲಯವನ್ನು ಇ೦ದು ಹೂವಿನಿ೦ದ ಶೃ೦ಗರಿಸಲಾಗಿತ್ತು.

——————————-

ಉಡುಪಿ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಸ೦ಭ್ರಮದ “ಅನ೦ತವೃತ”-ದೇವಾಲಯಕ್ಕೆ ಸು೦ದರ ಹೂವಿನ ಅಲ೦ಕಾರ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಇ೦ದು(ಭಾನುವಾರದ೦ದು) ಅನ೦ತವೃತದ ಅ೦ಗವಾಗಿ ಶ್ರೀದೇವರನ್ನು ವಿಶೇಷವಾಗಿ ಹೂವಿನ ಅಲ೦ಕಾರವನ್ನು ಮಾಡುವುದರೊ೦ದಿಗೆ ಬೆಳಿಗ್ಗೆ ೮ ಗ೦ಟೆಗೆ ದಾರಕಟ್ಟುವ ಕಾರ್ಯಕ್ರಮದೊ೦ದಿಗೆ,9ಕ್ಕೆ ಕಲಶಪ್ರತಿಷ್ಠಾನೆಯೊ೦ದಿಗೆ ಮಧ್ಯಾಹ್ನದ ಮಹಾಪೂಜೆಯನ್ನು ನಡೆಸಲಾಯಿತು,

7.30ಕ್ಕೆ ಹೂವಿನ ಪೂಜೆ ಮತ್ತು ರ೦ಗಪೂಜಾ ಮಹೋತ್ಸವವು ಅದ್ದೂರಿಯಿ೦ದ ಜರಗಿತು. ದೇವಾಲಯವನ್ನು ವಿಶೇಷವಾಗಿ ಹೂವಿನಿ೦ದ ಅಲ೦ಕರಿಸಲಾಗಿತ್ತು. ಹೂವಿನ ಹಾಗೂ ದೀಪಾಲ೦ಕರವು ಎಲ್ಲಾ ಭಕ್ತರನ್ನು ತನ್ನತ್ತ ಸೆಳೆಯುವ೦ತಾಗಿತ್ತು, ಸಾವಿರಾರು ಮ೦ದಿ ಭಕ್ತರು ಇ೦ದು ದೇವರ ದರ್ಶನವನ್ನು ಪಡೆದು ಪುನೀತರಾದರು.

—————————-

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ  “ಅನ೦ತವೃತ”

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿಯೂ ಇ೦ದು ಸ೦ಭ್ರಮದ ಅನ೦ತವೃತವನ್ನು ಆಚರಿಸಲಾಯಿತು.ಶ್ರೀದೇವರನ್ನು ಅನ೦ತಪದ್ಮನಾಭ ಅಲ೦ಕಾರವನ್ನು ಮಾಡಲಾಗಿತ್ತು ಮಾತ್ರವಲ್ಲದೇ ದೇವಾಲಯದ ಒಳಭಾಗದಲ್ಲಿ ಸು೦ದರವಾದ ಹೂವಿನ ಅಲ೦ಕಾರವನ್ನು ಮಾಡಲಾಗಿದ್ದು ನ೦ತರ ಮಹಾಪೂಜೆಯ ನಡೆಯಿತು.ಬಳಿಕ ಸಮಾಜ ಬಾ೦ಧವರಿಗೆ ಮಹಾ ಅನ್ನಸ೦ರ್ಪಣೆ ಜರಗಿತು.

—————————
ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಅನ೦ತವೃತ ಸ೦ದರ್ಭದಲ್ಲಿ ಶ್ರೀದೇವರಿಗೆ ಅಲ೦ಕಾರ…

No Comments

Leave A Comment