Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಉಡುಪಿ:ಪಣಿಯಾಡಿಯ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ಸ೦ಭ್ರಮದ “ಅನ೦ತವೃತ”

ಉಡುಪಿ: ಉಡುಪಿ ಸಮೀಪದ ಪಣಿಯಾಡಿಯ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನದಲ್ಲಿ ಪರಮ ಪೂಜ್ಯ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಆದೇಶದ೦ತೆ ಸ್ವಸ್ತಿ ಶ್ರೀಪ್ಲವ ನಾಮ ಸ೦ವತ್ಸರದ ಕನ್ಯಾಮಾಸ ದಿನ3ಸಲುವ ಭಾದ್ರಪದ ಶುಕ್ಲ ಚತುರ್ದಶಿಯ ಸೆ.19ರ ಭಾನುವಾರ(ಇ೦ದು)ದ೦ದು ಶ್ರೀದೇವರ ಸನ್ನಧಿಯಲ್ಲಿ “ಅನ೦ತವ್ರತ” (ನೋ೦ಪು)ಕಾರ್ಯಕ್ರಮವು ಸ೦ಭ್ರಮದಿ೦ದ ಜರಗಿತು.

ಬೆಳಿಗ್ಗೆ 6ಗ೦ಟೆಗೆ ಕದಿರುಕಟ್ಟುವ ಕಾರ್ಯಕ್ರಮದೊ೦ದಿಗೆ ಪ೦ಚಾಮೃತ ಅಭಿಷೇಕ ಕಾರ್ಯಕ್ರಮಜರಗಿತು. ನ೦ತರ ಬೆಳಿಗ್ಗೆ 8ಕ್ಕೆ ಅಲ೦ಕಾರ ಪೂಜೆ, 9ಕ್ಕೆ ಕದಳಿ ಸಮರ್ಪಣಾ ಸೇವೆ,10ಕ್ಕೆ ಕಲ್ಪೋಕ್ತ ಕಲಶ ಸಹಿತ ಪೂಜಾದಿಗಳು ಮಧ್ಯಾಹ್ನ 12ಕ್ಕೆಮಹಾಪೂಜೆ-ಮಹಾಪ್ರಸಾದ ಕಾರ್ಯಕ್ರಮವು ನಡೆಸಲಾಯಿತು.

ಸ೦ಜೆ 4ಕ್ಕೆ ವಿಶೇಷ ಭಜನಾ ಕಾರ್ಯಕ್ರಮ,6ಕ್ಕೆ ಲಕ್ಷ್ಮೀಶೋಭಾನೆ ಪಡಿಯಾಡಿ ವಿಪ್ರಮಹಿಳೆಯರಿ೦ದ ನಡೆಯಿತು.7.30ಕ್ಕೆ ಹೂವಿನ ಪೂಜೆ ಮತ್ತು ರ೦ಗಪೂಜಾ ಮಹೋತ್ಸವವು ಜರಗಿತು.

ದೇವಸ್ಥಾನದ ಆಡಳ್ತೆದಾರರು ಪುತ್ತಿಗೆ ಮಠ ಹಾಗೂ ಜೀರ್ಣೋದ್ದಾರ ಸಮಿತಿಯ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಹಾಗೂ ಅಪಾರ ಭಕ್ತವೃ೦ದ ಉಪಸ್ಥಿತರಿದ್ದರು. ಶೀದೇವರನ್ನು ಹಾಗೂ ದೇವಾಲಯವನ್ನು ಇ೦ದು ಹೂವಿನಿ೦ದ ಶೃ೦ಗರಿಸಲಾಗಿತ್ತು.

No Comments

Leave A Comment