Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆ: ಬಂಗಾಳದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ

ಕೋಲ್ಕತ್ತ: ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಬಿಜೆಪಿ ತೊರೆದಿದ್ದು, ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯನ್ನು ಬಂಗಾಳದಲ್ಲಿ ಬಿಜೆಪಿಗೆ ಉಂಟಾದ ಬಹುದೊಡ್ಡ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

“ಇಂದು ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್  ಹಾಗೂ ರಾಜ್ಯಸಭೆ ಸಂಸದ ದೆರೆಕ್‌ ಒ’ಬ್ರಾಯಿನ್ ಅವರ ಸಮ್ಮುಖದಲ್ಲಿ ಸಂಸದ, ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಟಿಎಂಸಿ ಸೇರ್ಪಡೆಗೊಂಡರು” ಎಂದು ಟಿಎಂಸಿ ಟ್ವೀಟ್ ಮಾಡಿದೆ.

ಎಲ್ಲವೂ 4 ದಿನಗಳಲ್ಲಿ ಆಯಿತು. ದೆರೆಕ್ ಒಬ್ರಾಯಿನ್ ಅವರೊಂದಿಗೆ ನನ್ನ ಮಗಳ ಶಾಲೆಯ ವಿಷಯವೊಂದರ ಬಗ್ಗೆ ಮಾತನಾಡಿದೆ. ಆ ಬಳಿಕ ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಅವರಿಂದ ನಾನು ದೊಡ್ಡ ಅವಕಾಶವೊಂದನ್ನು ಪಡೆದೆ, ನನ್ನ ಮೇಲೆ ಅವರು ಅಪಾರ ಭರವಸೆ ಇಟ್ಟಿದ್ದಾರೆ. ಅಸಾನ್ಸೋಲ್ ಸಂಸದನ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ಸೋಮವಾರ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುತ್ತೇನೆ. ನಾನೂ ಸಹ ಈ ಬೆಳವಣಿಗೆಯನ್ನು ನಿರೀಕ್ಷಿಸಿರಲಿಲ್ಲ, ಇದು ಅನಿರೀಕ್ಷಿತ ಅವಕಾಶ ಎಂದು ಸುಪ್ರಿಯೋ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಜು.31 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸುಪ್ರಿಯೋ ತಾವು ರಾಜಕೀಯ ತೊರೆಯಲು ನಿರ್ಧರಿಸಿರುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ಲೋಕಸಭಾ ಸದಸ್ಯನ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

No Comments

Leave A Comment