Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಸೋನು ಸೂದ್‌ ವಿರುದ್ಧದ ತನಿಖೆ ವಿಸ್ತರಿಸಿದ ಐಟಿ ಇಲಾಖೆ: ನಟನಿಗೆ ಸೇರಿದ ಮತ್ತಷ್ಟು ಪ್ರದೇಶಗಳ ಮೇಲೆ ದಾಳಿ!

ಮುಂಬೈ: ಬಾಲಿವುಡ್‌ ನಟ, ಸಮಾಜಸೇವಕ ಸೋನು ಸೂದ್ ಅವರ ವಿರುದ್ಧದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ತನಿಖೆಯನ್ನು ವಿಸ್ತರಿಸಿದ್ದು, ನಟನಿಗೆ ಸೇರಿದ ಮತ್ತಷ್ಟು ಪ್ರದೇಶಗಳ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.

ಮುಂಬೈ, ನಾಗ್ಪುರ ಮತ್ತು ಜೈಪುರದಲ್ಲಿ ಸೋನು ಸೂದ್ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ಬುಧವಾರ ಸೂನ್ ಸೂದ್ ಅವರ ಮನೆ ಮೇಲೆ ಐಟಿ ದಾಳಿ ಆರಂಭವಾಗಿತ್ತು. ಈ ದಾಳಿ ಗುರುವಾರ ಕೂಡ ಮುಂದುವರೆದಿತ್ತು. ಇಂದೂ ಕೂಡ ದಾಳಇ ಮುಂದುವರೆದಿದ್ದು, ಮುಂಬೈ, ನಾಗ್ಪುರ ಹಾಗೂ ಜೈಪುರದಲ್ಲಿನ ಆಸ್ತಿಪಾಸ್ತಿಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋನು ಸೂದ್‌ ಹಲವು ಕುಟುಂಬಗಳಿಗೆ ಆಪದ್ಬಾಂಧವ. ಸರ್ಕಾರಗಳು ಅಲಕ್ಷ್ಯ ಮಾಡಿದ್ದಾಗ ಅನೇಕ ಕುಟುಂಬಗಳಿಗೆ ನೆರವಾಗಿ ಜನರ ಮೆಚ್ಚುಗೆ ಗಳಿಸಿದ್ದರು. ಇದೀಗ ಇವರ ಮೇಲೆ ಐಟಿ ದಾಳಿ ನಡೆದಿರುವುದಕ್ಕೆ ಸಾರ್ವಜನಿಕ ವಲಯದಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ.

ಕೆಲ ದಿನಗಳ ಹಿಂದಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಎಎಪಿ ಸರ್ಕಾರದ ಸೋನು ಸೂದ್ ಅವರನ್ನು ದೇಶ್ ಕಾ ಮೆಂಟರ್ಸ್’ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿತ್ತು.

ಐಟಿ ದಾಳಿ ಕುರಿತು ನಿನ್ನೆಯಷ್ಟೇ ಕೇಜ್ರಿವಾಲ್ ಅವರು ಪ್ರತಿಕ್ರಿಯೆ ನೀಡಿ, ಸಂಕಷ್ಟದ ಸಮಯದಲ್ಲಿ ಹಲವಾರು ಕುಟುಂಬಗಳಿಗೆ ಸೋನು ಸೂದ್ ನೆರವಾಗಿದ್ದಾರೆ. ಭಾರತದ ಲಕ್ಷಾಂತರ ಕುಟುಂಬಗಳ ಪ್ರಾರ್ಥನೆ ಸೋನು ಸೂದ್ ಜೊತೆಗಿದೆ ಎಂದು ಹೇಳಿದ್ದರು.

No Comments

Leave A Comment