Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿಶ್ರೀಕೃಷ್ಣಮಠ:ಕಮ್ಯೂನಿಟಿ ಬಿನ್ಗೆ ಚಾಲನೆ

ಉಡುಪಿ:ಶ್ರೀಕೃಷ್ಣಮಠದ ಪರಿಸರದಲ್ಲಿ, ಪರ್ಯಾಯ ಪೀಠಾಧೀಶರಾದ ಶ್ರೀ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು,  ಬೆಂಗಳೂರಿನ ಸಾಹಸ್ ಸಂಸ್ಥೆ ಮತ್ತು ಉಡುಪಿ ನಗರಸಭೆಯ ಸಹಯೋಗದಲ್ಲಿ ಪರಿಸರ ಜಾಗೃತಿಯ ಸಲುವಾಗಿ ದೇವರ ನೈರ್ಮಲ್ಯವನ್ನು ಇತರ ಕಸಗಳೊಂದಿಗೆ ಸೇರಿಸದೆ ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸುವ  ಕಮ್ಯೂನಿಟಿ ಬಿನ್ ಯನ್ನು,ನಿರ್ಮಾಲ್ಯವನ್ನು ಅದಕ್ಕೆ ಹಾಕುವದರ ಮೂಲಕ ಉದ್ಘಾಟಿಸಿದರು,ಇಂತಹ ತೊಟ್ಟಿಗಳಿಂದ ದೇವರ ನಿರ್ಮಾಲ್ಯದಿಂದ ಊದುಬತ್ತಿಯನ್ನು ತಯಾರಿಸುವುದು ಮುಂತಾದ ಅನೇಕ ಉತ್ಪನ್ನಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಹಿರಿಯ ಅರೋಗ್ಯ ಅಧಿಕಾರಿ ಕರುಣಾಕರ, ನಗರಸಭಾ ವಾರ್ಡ್ ಸದಸ್ಯೆ, ಸಾಹಸ್ ಸಂಸ್ಥೆಯ ಜಾಗೃತಿ ಮೇಲ್ವಿಚಾರಕರಾದ ಜಾನ್ ರತ್ನಾಕರ,ಮಠದ ವ್ಯವಸ್ಥಾಪಕರಾದ ಗೋವಿಂದ ರಾಜು ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment