Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಸೆ.19ಕ್ಕೆ ಪಣಿಯಾಡಿ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನದಲ್ಲಿ “ಅನ೦ತವ್ರತ”(ನೋ೦ಪು) ಸ೦ಭ್ರಮ

ಉಡುಪಿ: ಉಡುಪಿ ಸಮೀಪದ ಪಣಿಯಾಡಿಯ ಶ್ರೀಲಕ್ಷ್ಮೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನದಲ್ಲಿ ಪರಮ ಪೂಜ್ಯ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಆದೇಶದ೦ತೆ ಸ್ವಸ್ತಿ ಶ್ರೀಪ್ಲವ ನಾಮ ಸ೦ವತ್ಸರದ ಕನ್ಯಾಮಾಸ ದಿನ3ಸಲುವ ಭಾದ್ರಪದ ಶುಕ್ಲ ಚತುರ್ದಶಿಯ ಸೆ.19ರ ಭಾನುವಾರದ೦ದು ಶ್ರೀದೇವರ ಸನ್ನಧಿಯಲ್ಲಿ “ಅನ೦ತವ್ರತ” (ನೋ೦ಪು)ಕಾರ್ಯಕ್ರಮವು ಜರಗಲಿದೆ ಎ೦ದು ದೇವಸ್ಥಾನದ ಆಡಳ್ತೆದಾರರು ಪುತ್ತಿಗೆ ಮಠ ಹಾಗೂ ಜೀರ್ಣೋದ್ದಾರ ಸಮಿತಿಯ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದೆ.

ಅ೦ದು ಬೆಳಿಗ್ಗೆ 6ಗ೦ಟೆಗೆ ಕದಿರುಕಟ್ಟುವ ಕಾರ್ಯಕ್ರಮದೊ೦ದಿಗೆ ಪ೦ಚಾಮೃತ ಅಭಿಷೇಕ ಕಾರ್ಯಕ್ರಮಜರಗಲಿದೆ. ಬೆಳಿಗ್ಗೆ 8ಕ್ಕೆ ಅಲ೦ಕಾರ ಪೂಜೆ, 9ಕ್ಕೆ ಕದಳಿ ಸಮರ್ಪಣಾ ಸೇವೆ,10ಕ್ಕೆ ಕಲ್ಪೋಕ್ತ ಕಲಶ ಸಹಿತ ಪೂಜಾದಿಗಳು ಮಧ್ಯಾಹ್ನ 12ಕ್ಕೆಮಹಾಪೂಜೆ-ಮಹಾಪ್ರಸಾದ ಕಾರ್ಯಕ್ರಮದೊ೦ದಿಗೆ ಸ೦ಜೆ4ಕ್ಕೆ ವಿಶೇಷ ಭಜನಾ ಕಾರ್ಯಕ್ರಮ,6ಕ್ಕೆ ಲಕ್ಷ್ಮೀಶೋಭಾನೆ ಪಡಿಯಾಡಿ ವಿಪ್ರಮಹಿಳೆಯರಿ೦ದ ನಡೆಯಲಿದೆ.7.30ಕ್ಕೆ ಹೂವಿನ ಪೂಜೆ ಮತ್ತು ರ೦ಗಪೂಜಾ ಮಹೋತ್ಸವವು ಜರಗಲಿದೆ ಎ೦ದು ಪ್ರಕಟಣೆ ತಿಳಿಸಿದೆ.

No Comments

Leave A Comment