Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ತಪ್ಪಿದ ಮಹಾ ದುರಂತ: ಪಾಕ್‌ನಲ್ಲಿ ತರಬೇತಿ ಪಡೆದಿದ್ದ 2 ಸೇರಿ 6 ಭಯೋತ್ಪಾದಕರನ್ನು ಬಂಧಿಸಿದ ದೆಹಲಿ ಪೊಲೀಸರು!

ನವದೆಹಲಿ: ಪಾಕಿಸ್ತಾನದ ನಿಯಂತ್ರಿತ ಉಗ್ರ ಸಂಘಟನೆಯ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಆರು ಮಂದಿ ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿದ್ದು ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಮೋದ್ ಕುಷ್ವಾಹಾ ಹೇಳಿದ್ದಾರೆ.

ಮುಖರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಈ ಭಯೋತ್ಪಾದಕರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಆರ್ಥಿಕ ನೆರವು ನೀಡುತ್ತಿರುವುದಾಗಿ ವಿಶೇಷ ತನಿಖಾದಳ ಪೊಲೀಸ್ ಅಧಿಕಾರಿ ನೀರಜ್ ಠಾಕೂರ್ ತಿಳಿಸಿದ್ದಾರೆ.

ಬಂಧಿತರನ್ನು ಒಸಾಮಾ ಸಾಮಿ, ಮೊಹಮ್ಮದ್ ಅಬು ಬಕರ್, ಜನ್ ಮೊಹಮ್ಮದ್ ಶೇಖ್, ಜೀಶಾನ್ ಖಮಾರ್ ಎಂದು ತಿಳಿದುಬಂದಿದೆ. ಇನ್ನು ಜೀಶನ್ ಖಮಾರ್ ಮತ್ತು ಮೊಹಮ್ಮದ್ ಅಮೀರ್ ಜಾವೇದ್ ಒಸಾಮಾ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment