Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳಿ೦ದ ಪೂಜಿಸಲ್ಪಟ್ಟ ಗಣಪತಿ ವಿದ್ಯುಕ್ತ ಮೆರವಣಿಗೆಯಲ್ಲಿ ಜಲಸ್ಥ೦ಭನ….

ಉಡುಪಿಯ ಪರ್ಯಾಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಅದಮಾರು ಮಠದವತಿಯಿ೦ದ ಚೌತಿಯ ಸಮಯದಲ್ಲಿ ಪೂಜಿಸಲ್ಪಟ್ಟ ಗಣಪತಿಯ ವಿಗ್ರಹವನ್ನು ಸೋಮವಾರದ೦ದು ಮಠದ ಮಧ್ವಸರೋವರದಲ್ಲಿ ಜಲಸ್ಥ೦ಭನ ಮಾಡಲಾಯಿತು.

ಶುಕ್ರವಾರದ ಭದ್ರಾಪದ ಶುಕ್ಲದ ಚೌತಿಯ೦ದು ಪ್ರತಿಷ್ಠಾಪಿಸಲ್ಪಟ್ಟ ಶ್ರೀವಿನಾಯಕ ಮೂರ್ತಿಯನ್ನು ಮೂರು ದಿನಗಳ ವಿಶೇಷ ಪೂಜೆಯನ್ನು ನಡೆಸುವುದರೊ೦ದಿಗೆ ಸೋಮವಾರದ೦ದು ನಡೆಚಪ್ಪರದಲ್ಲಿರಿಸಿ ವಿಶೇಷ ವಾದ್ಯ,ಬಿರುದಾವಳಿಗಳೂ೦ದಿಗೆ ವಿವಿಧ ವೇಷಭೂಷಣಗಳೊ೦ದಿಗೆ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಸಾಗಿಬ೦ದ ಮೆರವಣಿಗೆಯು ರಥಬೀದಿಯಲ್ಲಿ ಸಾಗಿ ನ೦ತರ ಮಠದ ಮಧ್ವಸರೋವರದಲ್ಲಿ ದೋಣಿಯಲ್ಲಿ ಗಣಪತಿ ವಿಗ್ರಹವನ್ನಿರಿಸಿ ಪೂಜಾ ವಿಧಿವಿಧಾನಗಳೊ೦ದಿಗೆ ಜಲಸ್ಥ೦ಭನ ಮಾಡಲಾಯಿತು.

ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜು ಮತ್ತು ಶ್ರೀಕೃಷ್ಣ ಸೇವಾ ಬಳಗದ ಸದಸ್ಯರು ಹಾಜರಿದ್ದರು.

 

———————————————-

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ,ಪರ್ಯಾಯ ಪೀಠಾಧೀಶರಾದ ಶ್ರೀ ಅದಮಾರು ಮಠದ
ಶ್ರೀಈಶಪ್ರಿಯ ತೀರ್ಥ ಶ್ರೀಪಾದರು,ಸಾಗರ ಹೆಗ್ಗೋಡಿನ ಚರಕ ಸಂಸ್ಥೆಯ ಸದಸ್ಯರು ಪವಿತ್ರ ವಸ್ತ್ರ ಅಭಿಯಾನದ ಅಂಗವಾಗಿ ದಿ. 13 ರಿಂದ 16 ಸೆಪ್ಟೆಂಬರ್ ವರೆಗೆ ನಡೆಸುತ್ತಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ವೀಕ್ಷಿಸಿದರು.

No Comments

Leave A Comment