Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ!

ಗಾಂಧಿನಗರ: ದಿಢೀರ್ ವಿದ್ಯಮಾನವೊಂದರಲ್ಲಿ  ಗುಜರಾತಿನ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿ ಶನಿವಾರ ಸಂಜೆ ರಾಜೀನಾಮೆ ನೀಡಿದ್ದಾರೆ.

ಮುಂದಿನ ವರ್ಷ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ದಿಢೀರ್ ಬೆಳವಣಿಗೆಯಲ್ಲಿ ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.  ಆದರೆ, ಇದಕ್ಕೆ ಏನು ಕಾರಣ ಎಂಬುದನ್ನು  ಬಹಿರಂಗಪಡಿಸಲಿಲ್ಲ.

ಉತ್ತರಾಖಂಡದ ತಿರಾತ್ ಸಿಂಗ್ ರಾವತ್ , ಕರ್ನಾಟಕದ ಬಿ.ಎಸ್. ಯಡಿಯೂರಪ್ಪ ನಂತರ ಈ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೂರನೇ ಮುಖ್ಯಮಂತ್ರಿ  ವಿಜಯ್ ರೂಪಾನಿ ಆಗಿದ್ದಾರೆ.

2016 ಆಗಸ್ಟ್ ಏಳರಿಂದ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಪ್ರಸ್ತುತ ಪಶ್ಟಿಮ ರಾಜ್ ಕೋಟ್  ಕ್ಷೇತ್ರದಿಂದ ಗುಜರಾತ್ ವಿಧಾನಸಭೆಯ ಸದಸ್ಯರಾಗಿದ್ದಾರೆ.

No Comments

Leave A Comment