Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಬೆಂಗಳೂರಿಗರೇ ಎಚ್ಚರ.. ನಗರದಲ್ಲಿ ಡೆಲ್ಟಾ ರೂಪಾಂತರದ 2 ಉಪ ವಂಶಾವಳಿ ಪತ್ತೆ!

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 3ನೇ ಅಲೆಯ ಭೀತಿ ನಡುವೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಡೆಲ್ಟಾ ರೂಪಾಂತರದ ಎರಡು ಉಪ-ವಂಶಾವಳಿ ವೈರಸ್ ಪ್ರಭೇದಗಳು ಪತ್ತೆಯಾಗಿವೆ.

ಹೌದು.. ದೈನಂದಿನ ಸೋಂಕು ಪ್ರಕರಗಳಲ್ಲಿನ ಇಳಿಕೆ ಕುರಿತು ಕೋವಿಡ್-19 ಅಂಕಿಅಂಶಗಳ ಕುರಿತು ರಾಜ್ಯ ವಾರ್ ರೂಂನ ದೈನಂದಿನ ಬುಲೆಟಿನ್ ಒಂದು ಧೈರ್ಯ ತುಂಬುವ ಚಿತ್ರಣವನ್ನು ಪ್ರಸ್ತುತಪಡಿಸಿದರೆ, ಮತ್ತೊಂದೆಡೆ SARSCoV-2 ಡೆಲ್ಟಾ ರೂಪಾಂತರದ ಎರಡು ಉಪ-ವಂಶಾವಳಿಗಳಾದ-AY4  ಮತ್ತು AY12-ಬೆಂಗಳೂರಿನ ಮಾದರಿಗಳಲ್ಲಿ ಪತ್ತೆಯಾಗಿದ್ದು, ಬದಲಾಗುತ್ತಿರುವ ವೈರಸ್ ಬಗ್ಗೆ ತಜ್ಞರಲ್ಲಿ ಆತಂಕ ಮೂಡಿಸಿದೆ. ಮತ್ತು ಈ ಉಪ ವಂಶಾವಳಿಗಳು ವ್ಯಾಕ್ಸಿನೇಷನ್ ಮೂಲಕ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ತಪ್ಪಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಎಂದು ಹೇಳಲಾಗಿದೆ.

ಸ್ಟ್ರಾಂಡ್ ಲೈಫ್ ಸೈನ್ಸಸ್ ಎಂಬ ಸಂಸ್ಥೆಯ ಈ ವೈರಸ್ ಉಪ ವಂಶಾವಳಿಯ ಸೀಕ್ವೆನ್ಸಿಂಗ್ ಮಾಡಿದ್ದು, ಕೋವಿಡ್ ಟಾಸ್ಕ್ ಫೋರ್ಸ್ ಕರ್ನಾಟಕದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಆರಂಭಿಸಲು ಆದೇಶ ಹೊರಡಿಸಿತ್ತು. ಇದು ರಾಜ್ಯದ ರೂಪಾಂತರಗಳ ಟ್ರೆಂಡ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಈ  ಅನುಕ್ರಮವು ಡೆಲ್ಟಾ AY4 ರೂಪಾಂತರದಲ್ಲಿ ಶೇಕಡಾ 30 ರಷ್ಟು ರೂಪಾಂತರವನ್ನು ಬಹಿರಂಗಪಡಿಸಿತು. ಆದರೆ ಇದು AY12 ನಲ್ಲಿನ ರೂಪಾಂತರ ಕೇವಲ 3 ಪ್ರತಿಶತವಾಗಿತ್ತು. ಆದರೆ ಹಿರಿಯ ವೈದ್ಯರೊಬ್ಬರು, ಜೀನೋಮ್ ಸೀಕ್ವೆನ್ಸಿಂಗ್‌ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಖಾಸಗಿಯಾಗಿ  ವಿವರಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಸ್ವಲ್ಪಮಟ್ಟಿಗೆ ರೂಪಾಂತರವಾದರೂ, ಇವುಗಳಿಂದ ಉಂಟಾಗುವ ಪರಿಣಾಮಗಳ ಕುರಿತು ಯಾವುದೇ ಅಧ್ಯಯನಗಳು ನಡೆದಿಲ್ಲವಾದ್ದರಿಂದ ನಾವು ಸುಮ್ಮನಿರಲಾಗುವುದಿಲ್ಲ. ಈ ಕುರಿತ ಅಧ್ಯಯನಗಳು ಮುಂದುವರೆಯುತ್ತವೆ. ಇದು ಡೆಲ್ಟಾ ರೂಪಾಂತರಕ್ಕಿಂತ ಕಡಿಮೆ  ರೂಪಾಂತರವಾಗಿದೆ ಎಂದು ಸಾಮಾನ್ಯ ವ್ಯಕ್ತಿಗಳು ಭಾವಿಸುತ್ತಾರೆ. ಆದರೆ ವೈರಾಲಜಿಸ್ಟ್‌ಗಳು ಜಾಗತಿಕವಾಗಿ ಅದು ನಿಜವಲ್ಲ, ಏಕೆಂದರೆ ಅದು ಅದರ ಸ್ವರೂಪವನ್ನು ಸ್ವಲ್ಪವಾದರೂ ಬದಲಾಯಿಸುತ್ತಿದೆ. ವೈರಸ್ ಬೇರೆ ಬೇರೆ ರೂಪಾಂತರಗಳನ್ನು ಪಡೆಯಲು ಸಹಾಯ ಮಾಡಬಹುದು. ಅದು ಖಂಡಿತವಾಗಿಯೂ  ಬದಲಾಗುತ್ತಿದೆ ಮತ್ತು ಇದಕ್ಕೆ ಹತ್ತಿರದ ಪರೀಕ್ಷೆಯ ಅಗತ್ಯವಿದೆ. ಡೆಲ್ಟಾದ ಉಪ-ವಂಶಾವಳಿ ವೈರಸ್ ಪ್ರಭೇಧಗಳು ಬೆಂಗಳೂರು ನಗರದಾದ್ಯಂತ ಹರಡಿವೆ ಮತ್ತು ಹೊಸ ರೂಪಾಂತರಗಳನ್ನು ಪಡೆಯುತ್ತಿವೆ ಎಂದು ವಿಶ್ಲೇಷಣೆಯಲ್ಲಿ ಹೇಳಿದೆ.

ಭಾರತದ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನ ಇತ್ತೀಚಿನ ಬುಲೆಟಿನ್ ಪ್ರಕಾರ, AY12 ಉಪವರ್ಗವು ಇಸ್ರೇಲ್‌ನಲ್ಲಿ ಕೋವಿಡ್ -19 ಉಲ್ಬಣಕ್ಕೆ ಕಾರಣವಾಗಿದೆ, ಆ ದೇಶದ ಜನಸಂಖ್ಯೆಯ ಶೇಕಡಾ 60 ರಷ್ಟು ಲಸಿಕೆಯಿಂದ ಕೂಡಿದೆಯಾದರೂ ಅಲ್ಲಿ ಸೋಂಕು  ಪ್ರಕರಣಗಳ ಹೆಚ್ಚಳಕ್ಕೆ  AY12 ಉಪವರ್ಗ ಪ್ರಮುಖ ಕಾರಣವಾಗಿದೆ ಎಂದು ಹೇಳಿತ್ತು.

ಜಾಗತಿಕ ಡೇಟಾಬೇಸ್‌ಗಳಲ್ಲಿ ಇನ್ನೂ ಅನೇಕ ರೂಪಾಂತರಗಳನ್ನು ವರದಿ ಮಾಡಲಾಗಿಲ್ಲ
ಇನ್ನು ಹೊಸ ವಂಶಾವಳಿಗಳನ್ನು ಒಕ್ಕೂಟವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಳವಳಕಾರಿ ಸಂಗತಿಯೆಂದರೆ, ಹಲವು ರೂಪಾಂತರಗಳು ಇನ್ನೂ ಜಾಗತಿಕ ಮಟ್ಟದಲ್ಲಿ ವರದಿಯಾಗಿಯೇ ಇಲ್ಲ. ಜಾಗತಿಕ ಅಧಿಕೃತ ದತ್ತಾಂಶಗಳ ಪಟ್ಟಿಯಲ್ಲಿ ಇವುಗಳ ಬಗ್ಗೆ ಇನ್ನೂ ವರದಿಯಾಗಿಲ್ಲ. N439K, N440Y/T/F,  L441Y/S/G/A/C/D/V/I, D442I/V/Y/F , S443E/V/Y/W/F ಮತ್ತು K444F/N/V/T/S/V ಈ ಪ್ರಭೇಧಗಳು AY4 ಮತ್ತು AY12 ಡೆಲ್ಟಾ ರೂಪಾಂತರಗಳಲ್ಲಿ ಕಂಡುಬಂದಿರುವ ಉಪ ರೂಪಾಂತರಗಳಾಗಿವೆ.

ಈ ಹಿಂದಿನ ಅಧ್ಯಯನಗಳ ಪ್ರಕಾರ, N439K ರೂಪಾಂತರವು ವೈರಸ್‌ನ ಫಿಟ್ನೆಸ್ ಅನ್ನು ಸುಗಮಗೊಳಿಸುತ್ತದೆ ಮತ್ತು ಪ್ರತಿಕಾಯ ರಕ್ಷಣೆಯನ್ನು ತಪ್ಪಿಸಲು ಅನುವು ಮಾಡಿಕೊಡುತ್ತದೆ.  ಅಂದರೆ ಇವುಗಳು ವೈರಸ್‌ನ ನಡವಳಿಕೆಯನ್ನು ಬದಲಾಯಿಸಬಹುದು ಎನ್ನಲಾಗಿದೆ. ಇನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ  ವರದಿಯು ಈ ರೂಪಾಂತರಗಳ ಆವರ್ತನದಲ್ಲಿ ಯಾವುದೇ ಹೆಚ್ಚಳವಾಗಿದೆಯೇ ಎಂದು ನೋಡಲು ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲು ಕೋರಿದೆ.

No Comments

Leave A Comment