Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಖ್ಯಾತ ನಿರೂಪಕಿ ಅನುಶ್ರೀ ಡ್ರಗ್ ಸೇವಿಸುತ್ತಿದ್ದರು : ಕಿಶೋರ್ ಶೆಟ್ಟಿ

ಮಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಡ್ರಗ್ ಸೇವನೆ ಮಾಡುತ್ತಿದ್ದರು, ನಮ್ಮ ಜೊತೆಯೇ ಡ್ರಗ್ ತೆಗೆದುಕೊಳ್ಳುತ್ತಿದ್ದರು ಎಂದು ಡ್ರಗ್ ಪ್ರಕರಣದ A 2 ಆರೋಪಿ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿವೆ.

ಸುಸ್ತಾಗಬಾರದು ಎಂಬ ಕಾರಣಕ್ಕೆ ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಕನ್ನಡದ ಖಾಸಗಿ ವಾಹಿನಿ ನಡೆಸುತ್ತಿದ್ದ ರಿಯಾಲಿಟಿ ಶೋ ವೇಳೆ ಡ್ರಗ್ಸ್ ಬಂದಿತ್ತು. ಆ ವೇಳೆ ಅನುಶ್ರಿ ಡ್ರಗ್ ಸೇವನೆ ಮಾಡಿದ್ದರು ಎಂದು ಕಿಶೋರ್ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದ ಕೊರಿಯೋಗ್ರಫಿ ಪ್ರಾಕ್ಟೀಸ್ ಮಾಡುವ ವೇಳೆ ಡ್ರಗ್ ಸೇವನೆ ಮಾಡುತ್ತಿದ್ದರು. ಡ್ಯಾನ್ಸ್ ಮಾಡಲು ಸುಸ್ತು ಆಗಬಾರದು ಎಂಬ ಕಾರಣಕ್ಕೆ ಡ್ರಗ್ ಸೇವನೆ ಮಾಡುತ್ತಿದ್ದರು ಎಂದು ಕಿಶೋರ್ ಹೇಳಿಕೆ ನೀಡಿದ್ದಾರೆ.

ಡ್ರಗ್ ಪ್ರಕರಣದ A1 ಆರೋಪಿ ತರುಣ್, A2 ಆರೋಪಿ ಕಿಶೋರ್ ಶೆಟ್ಟಿ ಮತ್ತು ಅನುಶ್ರೀ ಜೊತೆಯಲ್ಲೇ ಡ್ರಗ್ ಸೇವನೆ ಮಾಡುತ್ತಿದ್ದರು ಎಂಬುದನ್ನು ಸ್ವತಃ ಕಿಶೋರ್ ಶೆಟ್ಟಿಯೇ ಹೇಳಿಕೊಂಡಿದ್ದಾನೆ. ನಾವೆಲ್ಲ ಜೊತೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದೆವು. ಆ ವೇಳೆ ಅನುಶ್ರೀ ಡ್ರಗ್ಸ್ ತರುತ್ತಿದ್ರು ಎಂದು ಕಿಶೋರ್ ಹೇಳಿಕೊಂಡಿದ್ದಾನೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಕರ್ ಅನುಶ್ರೀ ಹೆಸರು ಮತ್ತೆ ಕೇಳಿಬಂದಿದ್ದು, ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಬಂಧಿತ ಡ್ಯಾನ್ಸರ್ ಕಿಶೋರ್ ಶೆಟ್ಟಿ ವಿಚಾರಣೆ ವೇಳೆ ನೀಡಿದ ಹೇಳಿಕೆ ಮತ್ತು ನಂತರ ಅನುಶ್ರೀ ಅವರನ್ನು ವಿಚಾರಣೆಗೊಳಪಡಿಸಿದಾಗ ಬಹಿರಂಗಗೊಂಡ ವಿವರದ ಹಿನ್ನೆಲೆಯಲ್ಲಿ ಅನುಶ್ರೀ ವಿರುದ್ಧ ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ಸಿಸಿಬಿ ಪೊಲೀಸರು ಡ್ಯಾನ್ಸರ್ ಕಿಶೋರ್ ಶೆಟ್ಟಿ ಅವರನ್ನು ಈ ಹಿಂದೆ ಬಂಧಿಸಿದ್ದರು.

No Comments

Leave A Comment