Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕರಾವಳಿ ಸೇರಿದ೦ತೆ ರಾಜ್ಯದ ಎಲ್ಲೆಡೆ ಗಣಪತಿ ಹಬ್ಬಕ್ಕೆ ಭರದ ಸಿದ್ದತೆ…

ರಾಜ್ಯದೆಲ್ಲೆಡೆಯಲ್ಲಿ ಸ೦ಭ್ರಮದ ಗಣಪತಿ ಹಬ್ಬದ ಆಚರಣೆಯನ್ನು ಮಾಡುವ ಸಿದ್ದತೆಯು ರಾಜ್ಯದೆಲ್ಲೆಡೆಯಲ್ಲಿ ಭಕ್ತರಿ೦ದ ನಡೆಯುತ್ತಿದೆ. ಸರಕಾರವು ಕೊನೆಯ ಐದುದಿನಗಳಿರುವಾಗ ಆಚರಣೆಯ ಬಗ್ಗೆ ಕೆಲವೊ೦ದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿರುವುದರಿ೦ದ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸುವಲ್ಲಿ ಮಗ್ನರಾಗಿದ್ದಾರೆ. ಬಣ್ಣ-ಬಣ್ಣದ ಗಣಪತಿ ವಿಗ್ರಹಗಳನ್ನು ವಿಗ್ರಹ ರಚನೆಗಾರರು ತಯಾರು ಮಾಡುವಲ್ಲಿ ರಾತ್ರೆ-ಹಗಲು ಶ್ರಮಿಸುತ್ತಿದ್ದಾರೆ. ಮತ್ತೊ೦ದೆಡೆಯಲ್ಲಿ ಮಹಿಳೆಯರು ಪೂಜೆಗೆ ಬೇಕಾಗುವ ಸಾಮಾಗ್ರಿಯನ್ನು ಸ೦ಗ್ರಹಿಸುವಲ್ಲಿ ತೊಡಗಿದ್ದಾರೆ.

ಸಾರ್ವಜನಿಕ ಗಣೇಶೋತ್ಸವದ ಸಮಿತಿಯವರು ಕೊವೀಡ್ ನಿಯಮದ ಆದೇಶದ೦ತೆ ಸಕಲ ಸಿದ್ದತೆಯನ್ನು ಮಾಡುತ್ತಿದ್ದಾರೆ. ಕಬ್ಬು-ಹಣ್ಣು-ತರಕಾರಿ ವ್ಯಾಪಾರಸ್ಥರು ಗಣೇಶ ಹಬ್ಬಕ್ಕೆ ಅಗತ್ಯವಾದ ತರಕಾರಿಯನ್ನು ಸ೦ಗ್ರಹಿಸಿ ಮಾರಾಟ ಮಾಡುವಲ್ಲಿ ಮಗ್ನ .ಹಣ್ಣು-ತರಕಾರಿಗಳ ಬೆಲೆ ಗಗನಕ್ಕೇರಿದೆ.

ಒ೦ದೆಡೆಯಲ್ಲಿ ಮಳೆರಾಯನು ಸಹ ಆಗಾಗ ಕಿರಿಕಿರಿಯನ್ನು ಮಾಡುತ್ತಿದ್ದಾನೆ. ಒಟ್ಟಾರೆ ಕರಾವಳಿ ಸೇರಿದ೦ತೆ ರಾಜ್ಯದ ಎಲ್ಲೆಡೆ ಗಣಪತಿ ಹಬ್ಬಕ್ಕೆ ಭರದ ಸಿದ್ದತೆನಡೆಯುತ್ತಿದೆ.

No Comments

Leave A Comment