Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಜಗತ್ತಿನ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಜಾನ್‌ ವಾಟ್ಕಿನ್ಸ್‌ ಇನ್ನಿಲ್ಲ

ಡರ್ಬನ್: ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ, ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಜಾನ್ ವಾಟ್ಕಿನ್ಸ್ (98) ನಿಧನ ಹೊಂದಿದ್ದಾರೆ.

ಜಾನ್ ವಾಟ್ಕಿನ್ಸ್ ಅವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸೋಮವಾರ ಪ್ರಕಟಿಸಿದೆ. 1949 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಜಾನ್ ವಾಟ್ಕಿನ್ಸ್ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ 679 ರನ್ ಗಳಿಸಿ, 31 ವಿಕೆಟ್ ಪಡೆದಿದ್ದರು.

ಅದೇ ರೀತಿ… 1952-53ರ ನಡುವೆ ತಮ್ಮ ಆಸ್ಟ್ರೇಲಿಯಾ ಪ್ರವಾಸದಲ್ಲಿ ವೃತ್ತಿಜೀವನ ಅತ್ಯುತ್ತಮ ದಾಖಲೆ ಸಾಧಿಸಿದರು. ಈ ಸರಣಿಯಲ್ಲಿ ಜಾನ್ ವಾಟ್ಕಿನ್ಸ್ 408 ರನ್ ಹಾಗೂ 16 ವಿಕೆಟ್ ಪಡೆದಿದ್ದರು. ವಾಟ್ಕಿನ್ಸ್ ಸಾವಿಗೆ ಹಲವು ಕ್ರಿಕೆಟಿಗರು ಸಂತಾಪ ಸೂಚಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ತೀವ್ರ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ತನ್ನ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮೊದಲು, ವಾಟ್ಕಿನ್ಸ್ ಎರಡನೇ ವಿಶ್ವಯುದ್ಧದ ಸಮಯದಲ್ಲಿ ದಕ್ಷಿಣ ಆಫ್ರಿಕಾದ ವಾಯುಪಡೆಯಲ್ಲಿ ಸ್ಪಿಟ್ ಫೈರ್ ಪೈಲಟ್ ಆಗಿ ತರಬೇತಿ ಪಡೆದಿದ್ದರು.

No Comments

Leave A Comment