Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ನಾಣ್ಯ ನುಂಗಿ ಮೃತ್ಯು…!

ಮೈಸೂರು: ಆಟವಾಡುತ್ತಿದ್ದ ಮಗುವೊಂದು ನಾಣ್ಯ ನುಂಗಿ ಮೃತಪಟ್ಟ ಧಾರುಣ ಘಟನೆ ಮ್ಯೆಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಸೆ.5ರ ಭಾನುವಾರದಂದು ನಡೆದಿದೆ.

ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದ ನಾಲ್ಕು ವರ್ಷದ ಹೆಣ್ಣು ಮಗು ಖುಷಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಮಗು ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿತ್ತು. ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ಮಗು ನುಂಗಿದೆ ಎನ್ನಲಾಗಿದೆ. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ವೇಳೆಯೇ ಮಗು ಮೃತಪಟ್ಟಿದೆ.

ಮಗುವಿನ ಸಾವಿನ ಸುದ್ದಿಯೂ ಪಾಲಕರಿಗೆ ಅಘಾತ ಉಂಟು ಮಾಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮನೆಯ ದೀಪವಾಗಿದ್ದ ಮಗಳು ಬಾರದ ಲೋಕಕ್ಕೆ ತೆರಳಿದೆ. ಮನೆಯಲ್ಲಿ ದುಃಖದ ಕಾರ್ಮೋಡ ಕವಿದಿದೆ. ಮಕ್ಕಳು ಮನೆಯಲ್ಲಿರಲಿ ಅಥವಾ ಹೊರಗಡೆ ಆಟವಾಡುತ್ತಿರಲಿ ಪಾಲಕರು ಕೇರ್ ತೆಗೆದುಕೊಳ್ಳಬೇಕಾದದ್ದು ಅತ್ಯವಶ್ಯ. ಇಲ್ಲವಾದಲ್ಲಿ ಈ ರೀತಿಯ ಅನಾಹುತಗಳಿಗೆ ಎಡೆಮಾಡಿಕೊಡಬೇಕಾಗುತ್ತದೆ.

No Comments

Leave A Comment