Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಬೊಲೆರೋ ಪಿಕಪ್ ಪಲ್ಟಿ : ಓರ್ವ ಸಾವು : ಡ್ರೈವರ್ ಪರಾರಿ…!!

ಕೋಟ ಸೆ. 6: ಹಣ್ಣು ಸಾಗಾಟದ ಬೊಲೆರೋ ಪಿಕಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ರಾಜಲಕ್ಷ್ಮಿ ಸಭಾಭವನದ ಎದುರುಗಡೆ ಸೋಮವಾರ ಮುಂಜಾನೆ ನಡೆದಿದೆ.

ಬಿಜಾಪುರದಿಂದ ಮಂಗಳೂರು ಕಳ್ಳಾಪು ಎ. ಪಿ. ಎಂ. ಸಿ ಗೆ ಹಣ್ಣು ಸಾಗಾಟ ಮಾಡುತಿದ್ದ ಬೊಲೆರೋ ಪಿಕಪ್ ವಾಹನವು ಕೋಟ ಮಣೂರು ಸಮೀಪ ಇಂದು ಮುಂಜಾನೆ 2:50 ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ಕಬ್ಬಿಣದ ತಂತಿಯ ಬೇಲಿಗೆ ಡಿಕ್ಕಿ ಹೊಡೆದಿದೆ.  ಡಿಕ್ಕಿಯ ರಬಸಕ್ಕೆ ಬೊಲೆರೋ ವಾಹನದಲ್ಲಿ  ಇದ್ದ ಕ್ಲೀನರ್ ರಸ್ತೆಗೆ ಎಸೆಯಲ್ಪಟ್ಟು ಅವರ ಮೇಲೆ ವಾಹನ ಪಲ್ಟಿ ಹೊಡೆದು  ಮೃತಪಟ್ಟಿರುವುದಾಗಿ  ತಿಳಿದು ಬಂದಿದೆ.

ಮೃತನು ಮಹಾರಾಷ್ಟ್ರ ಸಾಂಗ್ಲಿಯದ ದಿನೇಶ್ ಚಂದ್ರಶೇಖರ ಮುಂಚಾಂಡಿ (20) ಎಂದು ಗುರುತಿಸಲಾಗಿದೆ. ಹಾಗೂ ಅಪಘಾತ ವೆಸಗಿ ಪರಾರಿಯಾಗಿದ್ದ ಬೊಲೆರೋ ಪಿಕಪ್  ಚಾಲಕ ಮಹಾರಾಷ್ಟ್ರ ಸಾಂಗ್ಲಿಯ  ಶಿವಪುತ್ರ (25)  ಎಂದು ತಿಳಿಯಲಾಗಿದೆ.

ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ ಪಿ ಘಟನಾ ಸ್ಥಳಕ್ಕಾಗಮಿಸಿ  ಪರಿಶೀಲಿಸಿದ್ದಾರೆ. ವಾಹನದ ಅಡಿ ಭಾಗದಲ್ಲಿ ಇದ್ದ ಮೃತರನ್ನು ಕ್ರೈನ್ ಮೂಲಕ ಎತ್ತಿ ಬ್ರಹ್ಮಾವರ ಶವಗಾರಕ್ಕೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಕೋಟ ಪೊಲೀಸ್ ಸಿಬ್ಬಂದಿ ಮೋಹನ್ ಕೊತ್ವಲ್, ಹಾಗೂ ಸ್ಥಳೀಯರಾದ ಜೀವನ್ ಮಿತ್ರ ಆಂಬುಲೆನ್ಸ್ ನ ನಾಗರಾಜ್ ಪುತ್ರನ್, ವಸಂತ ಸುವರ್ಣ, ದಾಮೋದರ ಹಲವರು  ಸಹಕರಿಸಿದರು ಎಂದು ತಿಳಿಯಲಾಗಿದೆ. ಅಪಘಾತದ ಬಗ್ಗೆ ಕೋಟ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment